ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಮಲೆನಾಡು ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭದ್ರಾ ಜಲಾಶಯಕ್ಕೆ Bhadra Dam ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಶೀಘ್ರ 10 ಸಾವಿರ ಕ್ಯೂಸೆಕ್ಸ್ ನೀರು ಹರಿಸುವುದಾಗಿ ವರದಿಯಾಗಿದೆ.
ಸದ್ಯ 35 ಸಾವಿರ ಕ್ಯೂಸೆಕ್ ನೀರು ಒಳ ಹರಿವಿದ್ದು, ಇಂದಿನ ನೀರಿನ ಮಟ್ಟ 180.2 ಅಡಿಗೆ ಏರಿಕೆಯಾಗಿದೆ. ಡ್ಯಾಂ ಭರ್ತಿಗೆ ಕೇವಲ 6 ಅಡಿ ಮಾತ್ರ ಬಾಕಿ ಉಳಿದಿದೆ. ಇಂದು 35.321 ಕ್ಯೂಸೆಕ್ ಒಳಹರಿವಿದ್ದು, ನಿನ್ನೆ 41,645 ಕ್ಯೂಸೆಕ್ ಒಳ ಹರಿವಿತ್ತು. ಇಂದು ಬೆಳಗ್ಗೆ 9 ಗಂಟೆ ವೇಳೆಗೆ ನೀರಿನ ಮಟ್ಟ 180.2 ಅಡಿಗೆ ತಲುಪಿದೆ. ಇದರಿಂದ ಡ್ಯಾಂ ಭರ್ತಿಗೆ ಇನ್ನು 6 ಅಡಿ ಬಾಕಿ ಉಳಿದಿದೆ. ಕಳೆದ ವರ್ಷ ಈ ದಿನ ಕೇವಲ 156.8 ಅಡಿಯಷ್ಟು ನೀರಿತ್ತು. ಈಗ ಕಳೆದ ವರ್ಷಕ್ಕಿಂತ 24 ಅಡಿಗೂ ಹೆಚ್ಚುವರಿ ನೀರು ಸಂಗ್ರಹವಾಗಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















