ಕಲ್ಪ ಮೀಡಿಯಾ ಹೌಸ್ | ಕೇರಳ |
ಇಲ್ಲಿನ ಕೊಲ್ಲಂನಲ್ಲಿ ನೀಟ್ ಪರೀಕ್ಷೆಗೆ NEET Exam ಹಾಜರಾಗುವ ಮುನ್ನ ವಿದ್ಯಾರ್ಥಿನಿಯರ ಬ್ರಾ ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಮಹಿಳೆಯರನ್ನು ಬಂಧಿಸಲಾಗಿದ್ದು, ಈ ಕುರಿತ ತನಿಖೆಗೆ ಆದೇಶಿಸಲಾಗಿದೆ.
ಕೇರಳದ ಕೊಲ್ಲಂನಲ್ಲಿನ ಮಾರ್ ಥೋಮಾ ಇನ್ಸಿನ್‌ಸ್ಟಿಟ್ಯೂಟ್ ಆಫ್ ಇನ್‌ಫಾರ್ಮೇಷನ್ ಟೆಕ್ನಾಲಜಿಯಲ್ಲಿ ಭದ್ರತಾ ತಪಾಸಣೆ ನಡೆಸುತ್ತಿದ್ದಾಗ ಬ್ರಾನ ಲೋಹದ ಕೊಕ್ಕೆಗಳು ಬೀಪ್ ಆದ ನಂತರ ವಿದ್ಯಾರ್ಥಿನಿಗೆ ಬ್ರಾ ತೆಗೆಯುವಂತೆ ಹೇಳಿದ್ದರು ಎಂದು ಈ ಕುರಿತ ದೂರಿನಲ್ಲಿ ಉಲ್ಲೇಖವಾಗಿದೆ ಎಂದು ವರದಿಯಾಗಿದೆ.
ಇನ್ನು, ಈವರೆಗೂ ಘಟನೆಗೆ ಸಂಬಂಧಿಸಿದಂತೆ ಮೂರು ದೂರುಗಳು ದಾಖಲಾಗಿದ್ದು, ತಮ್ಮ ಮಕ್ಕಳಿಗೆ ಅವಮಾನ ಹಾಗೂ ಮಾನಸಿಕ ಹಿಂಸೆಯಾಗಿದೆ ಎಂದು ವಿದ್ಯಾರ್ಥಿನಿ ತಂದೆ ದೂರಿದ್ದಾರೆ.
Also read: ಬೆಂಗಳೂರಿನಿಂದ ಜೋಗ ಸೇರಿ ಶಿವಮೊಗ್ಗ ಜಿಲ್ಲೆಗೆ ಕೆಎಸ್’ಆರ್’ಟಿಸಿ ವಿಶೇಷ ಪ್ಯಾಕೇಜ್ ಟೂರ್ ಆರಂಭ
ಆದರೆ, ಈ ಘಟನೆಯನ್ನು ಪರೀಕ್ಷಾ ಕೇಂದ್ರದ ಅಧಿಕಾರಿಗಳು ತಳ್ಳಿ ಹಾಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post