ಕಲ್ಪ ಮೀಡಿಯಾ ಹೌಸ್ | ಬೆಳ್ಳಾರಿ |
ದುಷ್ಕರ್ಮಿಗಳಿಂದ ಭೀಕರವಾಗಿ ಹತ್ಯೆಯಾದ ಬಿಜೆಪಿ ನಾಯಕ ಪ್ರವೀಣ್ ನೆಟ್ಟಾರು ಅವರ ಪಾರ್ಥಿವ ಶರೀರದ ಅಂತಿಮ ದರ್ಶನದ ವೇಳೆ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿದ್ದು, ಇದರಿಂದ ತಲ್ಲಣಿಸಿದ ನಾಯಕರು ಸ್ಥಳದಲ್ಲಿ ಅಕ್ಷರಶಃ ಕೈಕಟ್ಟಿ ಮೌನವಾಗಿ ಕುಳಿತಿದ್ದಾರೆ.
ನಿನ್ನೆ ಭೀಕರವಾಗಿ ಹತ್ಯೆಗೆ ಒಳಗಾದ ಪ್ರವೀಣ್ ಅವರ ಅಂತಿಮ ದರ್ಶನದ ವೇಳೆ ಸಾವಿರಾರು ಮಂದಿ ನೆರೆದಿದ್ದರು. ರಾಜ್ಯದಲ್ಲಿ ಹಾಗೂ ದೇಶದಲ್ಲಿ ಬಿಜೆಪಿ ಸೇರಿದಂತೆ ಹಿಂದೂ ಕಾರ್ಯಕರ್ತರ ಸಾಲು ಸಾಲು ಹತ್ಯೆಯಾಗುತ್ತಿದ್ದರೂ ಸರ್ಕಾರಗಳು ಕಠಿಣ ಕ್ರಮ ಕೈಗೊಳ್ಳದೇ ಇರುವುದಕ್ಕೆ ಭಾರೀ ಆಕ್ರೋಶ ವ್ಯಕ್ತವಾಯಿತು.

Also read: ಮಂಗಳೂರು : ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಸ್ವಯಂ ಘೋಷಿತ ಬಂದ್
ಅಂತಿಮ ದರ್ಶನಕ್ಕೆ ಆಗಮಿಸಿದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಸಚಿವ ಸುನೀಲ್ ಕುಮಾರ್ ಅವರುಗಳು ಸಾವಿರಾರು ಕಾರ್ಯಕರ್ತರ ಘೆರಾವ್’ಗೆ ಒಳಗಾಗಬೇಕಾಯಿತು. ತಮ್ಮದೇ ಪಕ್ಷದ ಕಾರ್ಯಕರ್ತರ ಆಕ್ರೋಶದ ಬಿಸಿಗೆ ನಾಯಕರು ಅಕ್ಷರಶಃ ತಲ್ಲಣಿಸಿ, ಕೈ ಕಟ್ಟಿ ಕುಳಿತುಕೊಂಡಿದ್ದರು.










Discussion about this post