ಕಲ್ಪ ಮೀಡಿಯಾ ಹೌಸ್ | ಬಳ್ಳಾರಿ |
ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ Vijayanagara Shri Krishnadevaraya University ವ್ಯಾಪ್ತಿಯಲ್ಲಿ ಬರುವ 6 ಪ್ರಥಮ ದರ್ಜೆ ಮಹಾವಿದ್ಯಾಲಯಗಳು 2022-23ನೇ ಶೈಕ್ಷಣಿಕ ಸಾಲಿಗೆ ಸಂಯೋಜನಾ ಅರ್ಜಿ ಸಲ್ಲಿಸದೇ ಇರುವ ಕಾರಣ ಪ್ರಥಮ ವರ್ಷದ ಪದವಿ ಹಾಗೂ ಸ್ನಾತಕೋತ್ತರ ತರಗತಿಗಳಿಗೆ ಪ್ರವೇಶಾತಿಗೆ ಅನುಮತಿ ನೀಡಿರುವುದಿಲ್ಲ. ಆದ್ದರಿಂದ ಈ ಮಹಾವಿದ್ಯಾಲಯಗಳಲ್ಲಿ ಪ್ರವೇಶಾತಿ ಹೊಂದಬಾರದು ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Also read: ಗಣೇಶೋತ್ಸವ ಪೂರ್ವಭಾವಿ ಸಭೆ: ಅನುಮತಿ ನೀಡಲು ಏಕಗವಾಕ್ಷಿ ವ್ಯವಸ್ಥೆ
ಮಹಾವಿದ್ಯಾಲಯಗಳು:
ಕೊಟ್ಟೂರಿನ ಎನ್‍ಬಿ ಯುಜಿ ಡಿಪ್ಲೊಮಾ ಇನ್‍ಫೈರ್ & ಇಂಡಸ್ಟ್ರಿಯಲ್ ಸೇಫ್ಟಿ ಕಾಲೇಜು, ಕೊಟ್ಟೂರಿನ ತುಂಗಭದ್ರಾ ಬಿ.ಪಿ.ಎಡ್ ಮಹಾವಿದ್ಯಾಲಯ, ಬಳ್ಳಾರಿಯ ಜ್ಞಾನ ಜ್ಯೋತಿ ಕಾಲೇಜ್ ಆಫ್ ಸೋಷಿಯಲ್ ವರ್ಕ್(ಬಿಎ ಮತ್ತು ಎಂಎಸ್‍ಡಬ್ಲ್ಯೂ), ಗಂಗಾವತಿಯ ಜ್ಞಾನ ಸಂಗಮ ಗುರುಕುಲ ಪದವಿ ಮಹಾವಿದ್ಯಾಲಯ, ಗಂಗಾವತಿಯ ಸೇಂಟ್ ಪಾಲ್ಸ್ ಪದವಿ ಮಹಾವಿದ್ಯಾಲಯ, ಇಟಗಿಯ ಶ್ರೀ ಸಿದ್ಧೇಶ್ವರ ಜಗದ್ಗರು ಪದವಿ ಮಹಾವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಿದ್ದೇ ಆದಲ್ಲಿ ಅಂತಹ ಮಹಾವಿದ್ಯಾಲಯಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post