ಕಲ್ಪ ಮೀಡಿಯಾ ಹೌಸ್ | ಸೊರಬ |
ಪಟ್ಟಣದ ಖ್ಯಾತ ವೇದ ವಿದ್ವಾನ್ ಎಂ. ನಾರಾಯಣ ಭಟ್ ಅವರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಆಚಾರ್ಯ ಪದವಿಯಲ್ಲಿ (ಸ್ನಾತಕ ಪದವಿ) ಡಿಸ್ಟಿಂಕ್ಷನ್ ಪಡೆದಿದ್ದಾರೆ.
ಋಗ್ವೇದ ಸಲಕ್ಷಣ ಘನಪಾಠಿ, ದಶಗ್ರಂಥಿ, ವೇದಾಂಗಾಭಿಜ್ಞ ಋಗ್ವೇದ ವಿದ್ವಾನ್, ಆಗಮಪ್ರವರ, ಜ್ಯೋತಿಷಿಯಾದ ಇವರು, ಋಗ್ವೇದ ಸ್ಮಾರ್ತವನ್ನು ವಿಶೇಷ ವಿಷಯವಾಗಿ ಅಧ್ಯಯನಿಸಿದ್ದರು.
ಇವರ ಸಾಧನೆಗೆ ವಿವಿಧ ಸಂಘ ಸಂಸ್ಥೆಗಳ ಜೊತೆಗೆ ವಿಪ್ರ ಸಮುದಾಯ ಮೆಚ್ಚುಗೆ ಸೂಚಿಸಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















