ಕಲ್ಪ ಮೀಡಿಯಾ ಹೌಸ್ | ಬೀದರ್ |
ನಾವೆಲ್ಲರೂ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾಗಿದೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವ ಮೂಲಕ ಅವರನ್ನು ಶಿಕ್ಷಣವಂತರನ್ನಾಗಿ ಮಾಡೋಣವೆಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ MLA Bandeppa Khashempur ರವರು ಹೇಳಿದರು.
ಬೀದರ್ ನಗರದ ಪೂಜ್ಯ ಚನ್ನಬಸವ ಪಟ್ಟದ್ದೆವರು ರಂಗಮಂದಿರದಲ್ಲಿ ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ವತಿಯಿಂದ ಭಾನುವಾರ ನಡೆದ ಗೊಂಡ (ಕುರುಬ) ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಅವರಿಂದ ಉತ್ತಮ ಸಮಾಜ ನಿರ್ಮಿಸಬಹುದಾಗಿದೆ ಎಂದರು.
ಕನಕದಾಸರು ಅಂದು ತಮಗೆ ಸಿಕ್ಕ ಬಂಗಾರವನ್ನು ಸಮಾಜಕ್ಕೆ ಒಪ್ಪಿಸಿದ್ದರು. ಬೊಮ್ಮಗೊಂಡೇಶ್ವರರು ಅಂದಿನ ರಾಜರಿಗೆ ಮತ್ತು ಸಾಮ್ರಾಜ್ಯದ ಸಾರ್ವಜನಿಕರಿಗೆ ನೀರು ದೊರಕಿಸಿಕೊಟ್ಟರು. ಅವರು ಯಾವುದೇ ಜಾತಿ, ಧರ್ಮಕ್ಕಾಗಿ ಕೆಲಸ ಮಾಡಲಿಲ್ಲ. ಅಂದಿನ ರಾಜರು ಬೊಮ್ಮಗೊಂಡೇಶ್ವರಿಗೆ ಕೊಡುಗೆ ನೀಡಲು ಮುಂದಾದಾಗ ಅವರು ತಮಗಾಗಿ ಏನನ್ನು ಕೇಳಲಿಲ್ಲ. ಸಮಾಜಕ್ಕಾಗಿ ಕೇಳಿದ್ದರು.
ಇವತ್ತಿನ ದಿನಗಳಲ್ಲಿ ಈ ರೀತಿಯ ಅಭಿನಂದನಾ ಸಮಾರಂಭಗಳು ಅವಶ್ಯಕವಾಗಿವೆ. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಮತ್ತು ಸಮಾಜದ ಸಾಧಕರಿಗೆ ಅಭಿನಂದನೆ ಸಲ್ಲಿಸುತ್ತಿರುವುದು ಅನೇಕರಿಗೆ ಮಾದರಿಯಾಗಲಿದೆ. ಅನೇಕರಿಗೆ ಪ್ರೋತ್ಸಾಹ ಸಿಗುತ್ತದೆ. ಈ ರೀತಿಯ ಕಾರ್ಯಕ್ರಮಗಳು ಇನ್ನೂ ಹೆಚ್ಚಾಗಲಿ. ಇಂತಹ ಕಾರ್ಯಕ್ರಮಗಳನ್ನು ಮಾಡುತ್ತಿರುವ ಸಂಘಟನೆಯ ಮುಖಂಡರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
Also read: ಎಲ್ಲಾ ಧರ್ಮಗುರು, ಹಿರಿಯರಿಂದ ಯುವಕರ ನಿಯಂತ್ರಣ ಸಾಧ್ಯ: ಶಾಂತಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ
ಬುದ್ಧ, ಬಸವ, ಅಂಬೇಡ್ಕರ್, ಕನಕರು ಯಾವುದೇ ಒಂದು ಜಾತಿ, ಧರ್ಮಕ್ಕೆ ಸಿಮೀತವಾಗಲಿಲ್ಲ. ಸಮಸಮಾಜದ ನಿರ್ಮಾಣಕ್ಕಾಗಿ ಮತ್ತು ಸಮಾಜದಲ್ಲಿನ ಅನ್ಯಾಯ ನಿವಾರಣೆಗಾಗಿ ಶ್ರಮಿಸಿದ್ದಾರೆ. ಅವರ ನಿಟ್ಟಿನಲ್ಲಿ ನಾವೆಲ್ಲರೂ ಸಾಗಬೇಕಾಗಿದೆ. ನಾವೆಲ್ಲರೂ ಶಿಕ್ಷಣದಲ್ಲಿ ಕ್ರಾಂತಿ ಮಾಡಬೇಕಾಗಿದೆ. ಮಕ್ಕಳಿಗಾಗಿ ನಾವೆನನ್ನಾದರೂ ಆಸ್ತಿ ಮಾಡಬೇಕು ಎನ್ನುವುದಾದರೇ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಆ ಮಕ್ಕಳು ಓದಿ ಉನ್ನತ ಸ್ಥಾನ ಪಡೆದು ತಂದೆ ತಾಯಿಯರನ್ನು, ಕುಟುಂಬವನ್ನು ಚನ್ನಾಗಿ ನೋಡಿಕೊಳ್ಳಬೇಕು ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಸಿಂಧುತ್ವ ಸಮಸ್ಯೆ ನಿವಾರಣೆಗಾಗಿ ನಿರಂತರ ಹೋರಾಟ:
ಸಿಂಧುತ್ವದ ವಿಷಯದಲ್ಲಿನ ಸಮಸ್ಯೆ ನಿವಾರಣೆಗಾಗಿ ನಾವೆಲ್ಲರೂ ನಿರಂತರವಾಗಿ ಹೋರಾಟ ಮಾಡುತ್ತಿದ್ದೇವೆ. ಇತ್ತೀಚೆಗೆ ನೂರಕ್ಕೂ ಹೆಚ್ಚಿನ ಸಿಂಧುತ್ವ ಸಮಸ್ಯೆಯನ್ನು ಪರಿಹರಿಸಲಾಗಿದೆ. ಜಿಲ್ಲಾಧಿಕಾರಿಗಳು ಸಿಂಧುತ್ವ ಸಮಸ್ಯೆ ಪರಿಹಾರದ ವಿಷಯದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಸಮಾಜದ ಒಳಿತಿಗಾಗಿ ಎಲ್ಲರೂ ಒಗ್ಗಟ್ಟಾಗಿ ಸಾಗೋಣ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಔದತಪೂರ ಯಲ್ಲಾಲಿಂಗ ಮಠದ ಶ್ರೀ ಶ್ರೀ ಶ್ರೀ ಷಡಕ್ಷರಿ ಪೂಜ್ಯ ಶಿವಯೋಗಿ ಶ್ರೀ ಮಚೇಂದ್ರನಾಥ ಮಹಾರಾಜರು, ಗೊಂಡ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸಂತೋಷ ಜೋಳದಾಪಕೆ, ಪ್ರಮುಖರಾದ ಅಮೃತರಾವ ಚಿಮಕೋಡೆ, ಮಲ್ಲಿಕಾರ್ಜುನ ಬಿರಾದಾರ, ಪಂಡಿತರಾವ ಚಿದ್ರಿ, ಭೀಮಸಿಂಗ ಮಲ್ಕಾಪೂರ, ಬಸವರಾಜ ಮಾಳಗೆ, ಇಂದುಮತಿ ಚಿದ್ರಿ, ಹಣಮಂತ ಮಲ್ಕಾಪೂರೆ, ಅಂಜಲಿ ಕೆ.ಡಿ ಗಣೇಶ, ಬಕ್ಕಪ್ಪಾ ನಾಗೂರೆ, ಮಾಳಪ್ಪ ಅಡಸಾರೆ, ಪೀರಪ್ಪಾ ಯರನಳ್ಳಿ, ಚಂದ್ರಕಾಂತ ಮೇತ್ರೆ, ಬೊಮ್ಮಗೊಂಡ ಚಿಟ್ಟಾವಾಡಿ, ತುಕ್ಕರಾಮ ಚಿಮಕೋಡೆ, ಸಚಿನ್ ಮಲ್ಕಾಪೂರೆ, ರಮೇಶ್ ಬಿರಾದಾರ, ದೀಪಕ ಚಿದ್ರಿ, ಕಲ್ಲಪ್ಪಾ ಬೆನಕನಳ್ಳಿಕರ್, ಅಮೀತ್ ಸೋಲಪೂರ, ನಾಗೇಶ ಜಾನಕನೋರ, ಲಕ್ಷ್ಮಣ ಮೇತ್ರೆ, ಸುಭಾಷ್ ನಾಗೂರೆ, ಸಂತೋಷ ಮುದ್ದಾ ಸೇರಿದಂತೆ ಅನೇಕರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post