ಕಲ್ಪ ಮೀಡಿಯಾ ಹೌಸ್ | ಬೀದರ್ |
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪುರ್ ಪಿ ಗ್ರಾಮದಲ್ಲಿ ಭಾನುವಾರ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ MLA Bandeppa Khashempur ಪಾಲ್ಗೊಂಡು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರವರ ನಾಮ ಫಲಕಕ್ಕೆ (ಸರ್ಕಲ್) ಪೂಜೆ ಸಲ್ಲಿಸಿದರು.
ಖಾಶೆಂಪುರ್ ಗ್ರಾಮದ ಮರಗೆಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಶಾಸಕರು, ಅಲ್ಲಿಯೇ ಇದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಸರ್ಕಲ್ ನಲ್ಲಿ ಸಂಗೊಳ್ಳಿ ರಾಯಣ್ಣರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಉಜ್ವಲ್ ಖಾಶೆಂಪುರ್, ಶಿವಕುಮಾರ್, ಪ್ರಹ್ಲಾದ್, ಮಲ್ಲಪ್ಪ, ಲೋಕೇಶ್, ಸಂದೀಪ್, ಆಕಾಶ್, ನವೀನ್, ಸಚಿನ್, ಅಖಿಲೇಶ್, ಅಂಬರೀಶ್, ಧನರಾಜ್, ರಮೇಶ್, ರಾಜ್ ಕುಮಾರ್, ಆನಂದ್, ರಾಹುಲ್, ಶಿವಲಿಂಗ, ನಾಗೇಶ್, ಶರಣಪ್ಪ ಖಾಶೆಂಪುರ್, ರವಿಕುಮಾರ್ ಗುಮಾಸ್ತಿ ಸೇರಿದಂತೆ ಅನೇಕರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















