ಕಲ್ಪ ಮೀಡಿಯಾ ಹೌಸ್ | ಮಡಿಕೇರಿ |
ಗೌರಿ-ಗಣೇಶ ಹಬ್ಬದ Gowri-Ganesha festival ಪ್ರಯುಕ್ತ ಗೌರಿ ಹಾಗು ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪಿಸಿ, ಪೂಜಿಸಿ ಕೆರೆ/ ಬಾವಿ ಹಾಗು ಇನ್ನಿತರೆ ನೈಸರ್ಗಿಕ ಜಲಮೂಲಗಳಿಗೆ ವಿಸರ್ಜಿಸುವುದು ಸಂಪ್ರದಾಯವಾಗಿದ್ದು, ಬಣ್ಣದಿಂದ ತಯಾರಿಸಿರುವ ಮೂರ್ತಿಗಳನ್ನು ಸಂಪ್ರದಾಯದಂತೆ ಕೆರೆ/ ಬಾವಿ ಹಾಗೂ ಇನ್ನಿತರೆ ನೈಸರ್ಗಿಕ ಜಲಮೂಲಗಳಿಗೆ ವಿಸರ್ಜಿಸಿದಾಗ ಕಲುಷಿತವಾಗುವುದನ್ನು ತಪ್ಪಿಸಬೇಕಿದೆ.
ಹಾಗೆಯೇ ಮನೆ ಮನೆಗಳಲ್ಲಿ ರೋಗ ನಿರೋಧಕ ಶಕ್ತ್ತಿಯುಳ್ಳ್ಳ ಅರಿಶಿನ ಮಿಶ್ರಿತವಾದ ಗೋಧಿ ಹಿಟ್ಟು ಅಥವಾ ರಾಗಿ ಹಿಟ್ಟಿನಿಂದ ಮಾಡಿದ ಪುಟ್ಟ ಗಣೇಶ ವಿಗ್ರಹಗಳನ್ನು ಪೂಜೆ ಮಾಡಿದಲ್ಲಿ ಕುಟುಂಬದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಈ ವರ್ಷದ ಗೌರಿ-ಗಣೇಶ ಚರ್ತುರ್ಥಿ ಆಚರಣೆಯನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಈ ಕ್ರಮಗಳನ್ನು ಸಾರ್ವಜನಿಕರು ಅನುಸರಿಸಲು ಕೋರಿದೆ.
ವಿಷಕಾರಿ ರಾಸಾಯನಿಕ, ಲೋಹದ ಲೇಪದ ಪ್ಲಾಸ್ಟರ್ ಆಫ್ ಪ್ಯಾರಿಸ್‍ನ ಗಣೇಶನ ಮೂರ್ತಿ ಬಳಕೆ ಮಾಡಬೇಡಿ. ಸಾದಾ ಜೇಡಿ ಮಣ್ಣು, ಅರಿಶಿನ ಮಿಶ್ರತವಾದ ಗೋಧಿ ಹಿಟ್ಟು ಅಥವಾ ರಾಗಿಹಿಟ್ಟಿನಿಂದ ಮುದ್ದಾದ ಪುಟ್ಟ ಗಣೇಶ ವಿಗ್ರಹವನ್ನು ಸ್ಥಾಪಿಸಿ. ಎಲೆ, ಪತ್ರೆ ಮತ್ತು ಹೂವುಗಳಿಂದ ಗಣಪತಿಯನ್ನು ಸಿಂಗರಿಸಿ. ಬಾವಿ, ಕೆರೆ ಹೊಳೆಗಳಲ್ಲಿ ಗಣಪತಿ ವಿಸರ್ಜನೆ ಮಾಡಬೇಡಿ, ಹಾಗೆ ಮಾಡಿದರೆ ಅಂತರ್ಜಲ, ಕುಡಿಯುವ ನೀರಿನ ಸೆಲೆ-ಎಲ್ಲವೂ ಹಾಳಾಗುತ್ತವೆ. ಬದಲಿಗೆ ಮನೆಯಲ್ಲಿಯೇ ಬಕೆಟ್‍ನಲ್ಲಿ ವಿಸರ್ಜಿಸಿ, ಸೂಚಿತ ಕೆರೆಗಳಲ್ಲಿ ವಿಸರ್ಜಿಸುವ ಮುನ್ನ ಹೂವು, ವಸ್ತ್ರ, ಎಲ್ಲವನ್ನೂ ತೆಗೆಯಿರಿ. ಗಣಪತಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸಬೇಡಿ, ಪಟಾಕಿಯ ಹೊಗೆ ವಿಷಪೂರಿತ, ಅಲ್ಲದೆ ರಸ್ತೆ ತುಂಬಾ ಕಸವಾಗುತ್ತದೆ. ಪಟಾಕಿಯಿಂದ ಉಂಟಾಗುವ ಹೆಚ್ಚಿನ ಶಬ್ದವೂ ಕಿವಿಗೆ ಹಾನಿಕರ. ಗಣೇಶ ಹಬ್ಬದಲ್ಲಿ ರಸ್ತೆ, ಚರಂಡಿಯಲ್ಲಿ ಹೂವಿನ ಹಾರ, ತಟ್ಟೆ ಲೋಟ, ಎಲೆ ಎಸೆಯಬೇಡಿ. ಕಸದ ಡಬ್ಬಿಗಳನ್ನು ಬಳಸಿ. ಗೌರಿ-ಗಣೇಶ ಚರ್ತುರ್ಥಿ ಆಚರಣೆಯನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಕೋರಿದ್ದಾರೆ.
Also read: ಯುವ ಸಮೂಹದ ನಾವಿನ್ಯತೆಗಳಿಂದ ಭಾರತ ವಿಶ್ವಗುರುವಾಗಲಿದೆ : ಪ್ರೊ.ಬಿ.ಪಿ. ವೀರಭದ್ರಪ್ಪ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post