ಕಲ್ಪ ಮೀಡಿಯಾ ಹೌಸ್ | ಶಿರಾಳಕೊಪ್ಪ |
ಕಟ್ಟಡ ಕಾಮಗಾರಿ ಗುತ್ತಿಗೆ ಹಣ ಪಾವತಿ ವಿಚಾರದಲ್ಲಿ ದಯಾನಂದ ಮತ್ತು ಕೊಟ್ರೇಶ್ ಎಂಬುವರ ನಡುವೆ ಆರಂಭವಾದ ವ್ಯಾಜ್ಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.
ಘಟನೆ ಹಿನ್ನೆಲೆ:
ದಯಾನಂದ್ (೬೯) ಕೊಲೆಯಾದ ವ್ಯಕ್ತಿಯಾಗಿದ್ದು, ಕೊಟ್ರೇಶ್ ಎಂಬಾತನಿಗೆ ಕಟ್ಟಡ ಕಾಮಗಾರಿಯ ಗುತ್ತಿಗೆ ನೀಡಲಾಗಿತ್ತು. ಸರಿಯಾಗಿ ಕೆಲಸ ನಿರ್ವಹಿಸದ ಹಿನ್ನೆಲೆ ಹಣ ಪಾವತಿಸಿರಲಿಲ್ಲ. ಹಲವು ಬಾರಿ ಕೇಳಿದಾಗಲು ಹಣ ನೀಡದ ಕಾರಣ ಸಿಟ್ಟಿಗೆದ್ದ ಕೊಟ್ರೇಶ್ ದಯಾನಂದ್‌ಗೆ ಚಾಕು ಇರಿದು ಹಲ್ಲೆ ನಡೆಸಿದ್ದಾನೆ. ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ದಯಾನಂದ್ ಮೃತಪಟ್ಟಿದ್ದಾರೆ.
ಘಟನೆಯಿಂದ ಆಕ್ರೋಶಗೊಂಡ ದಯಾನಂದ್ ಅವರ ಮಗ ರಾಘವೇಂದ್ರ (೪೦) ಕೊಟ್ರೇಶ್‌ಗೆ ಚಾಕು ಇರಿದು ಹಲ್ಲೆಗೆ ಯತ್ನಿಸಿದ್ದು, ಕೊಟ್ರೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Also read: ಗೆದ್ದವರನ್ನು ಪ್ರೋತ್ಸಾಹಿಸಿ, ಸೋತವರು ಪ್ರಯತ್ನ ಮುಂದುವರೆಸಿ: ಡಾ.ಬಿ.ಸಿ. ಸತೀಶ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post