ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗಿಡ, ಗಂಟೆ, ಬೆಳೆದು ಹಾವು, ಹಂದಿಗಳ ಆವಾಸಸ್ಥಾನವಾಗಿದ್ದ ಕೃಷಿನಗರದ ತರಳಬಾಳು ಹಾಸ್ಟೆಲ್ ಪಕ್ಕದ ಪಾರ್ಕ್ ಜಾಗವನ್ನು ಸ್ವಚ್ಛಗೊಳಿಸಿ, ಗಿಡ ನೆಡುವ ಮೂಲಕ ಭಾನುವಾರ ಹಲವು ಪರಿಸರಾಸಕ್ತ ತಂಡಗಳ 150 ಕ್ಕೂ ಹೆಚ್ಚು ಸದಸ್ಯರು ಜೀವಕಳೆ ತುಂಬಿದರು.
ನಗರದ ಸರ್ಜಿ ಪೌಂಡೇಷನ್, ಪರೋಪಕಾರಂ, ರೌಂಡ್ ಟೇಬಲ್ ಇಂಡಿಯಾ ಘಟಕ ಹಾಗೂ ತರಳಬಾಳು, ಬಿಸಿಎಂ ಹಾಸ್ಟೆಲ್ ವಾರ್ಡನ್‌ಗಳು ಹಾಗೂ ವಿದ್ಯಾರ್ಥಿನಿಯರು, ಸ್ಥಳೀಯ ನಿವಾಸಿಗಳು ಮುಂಜಾನೆ ಆರು ಗಂಟೆಯಿಂದಲೇ ಬೃಹದಾಕಾರವಾಗಿ ಬೆಳೆದು ನಿಂತಿದ್ದ ಗಿಡಗಳನ್ನು ತೆರವುಗೊಳಿಸಿದರು. ಅಲ್ಲದೇ ಪ್ಲಾಸ್ಟಿಕ್, ಬಾಟಲಿ ಹಾಗೂ ತ್ಯಾಜ್ಯವನ್ನು ಸಂಗ್ರಹಿಸಿ ಸೂಕ್ತ ವಿಲೇವಾರಿ ಮಾಡಿದರು. ಅಲ್ಲದೇ ವಿವಿಧ ಜಾತಿಯ 50 ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು, ಗೊಬ್ಬರವನ್ನೂ ಹಾಕಲಾಯಿತು. ಇದಕ್ಕೂ ಮೊದಲು ವೃಕ್ಷಕ್ಕೆ ಪೂಜೆ ಸಲ್ಲಿಸುವ ಮೂಲಕ ವೃಕ್ಷದಿನವನ್ನು ಆಚರಿಸಲಾಯಿತು. ಶ್ರಮಾಧಾನ ಕಾರ್ಯಕ್ರಮದಲ್ಲಿ 150 ಕ್ಕೂ ಹೆಚ್ಚು ಪರಿಸರ ಪ್ರೇಮಿಗಳು ಭಾಗವಹಿಸಿದ್ದರು. ಹಾಳು ಸುರಿಯುತ್ತಿದ್ದ ಪಾರ್ಕ್ ಪ್ರದೇಶಕ್ಕೀಗ ಜೀವಕಳೆ ಬಂದಿದೆ.
ಈ ಸಂದರ್ಭ ಪಾಲಿಕೆಯ ಆರೋಗ್ಯ, ಸಾರ್ವಜನಿಕ ಮತ್ತು ಶಿಕ್ಷಣ ಸಾಮಾಜಿಕ ನ್ಯಾಯಕ್ಕಾಗಿ ಸಮಿತಿ ಅಧ್ಯಕ್ಷ, ಮತ್ತು ಸದಸ್ಯರಾದ ದೀರರಾಜ್ ಹೊನ್ನವಿಲೆ ಮಾತನಾಡಿ, ಸರ್ಜಿ ಪೌಂಡೇಷನ್ ಮೂಲಕ ಉಚಿತ ಆರೋಗ್ಯ ತಪಾಸಣೆ , ರಕ್ತದಾನ ಶಿಬಿರ, ಪರಿಸರ ಜಾಗೃತಿ ಸೇರಿದಂತೆ ಸಮಾಜಮುಖಿ ಸೇವಾ ಕಾರ್ಯಗಳು ನಡೆಯುತ್ತಿವೆ. ಡಾ.ಧನಂಜಯ ಸರ್ಜಿ ಅವರು ನಿಜಕ್ಕೂ ಅಭಿನಂದನಾರ್ಹರು. ಇಂತಹ ಸಂಘಟನೆಗಳ ಜೊತೆಗೆ ಸ್ಥಳೀಯರು ಕೈಜೋಡಿಸಬೇಕು. ಆರ್ಗೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಸಲಹೆ ನೀಡಿದರು. ಪರೋಪಕಾರಂ ಶ್ರೀಧರ ಮಾತನಾಡಿದರು. ತ್ಯಾಗರಾಜ್, ಈಶ್ವರ್ ಸರ್ಜಿ ಸೇರಿದಂತೆ ನೂರಾರು ಪರಿಸರ ಪ್ರೇಮಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post