ಕಲ್ಪ ಮೀಡಿಯಾ ಹೌಸ್ | ಕೊಚ್ಚಿ |
ಭಾರತದ ಮೊಟ್ಟ ಮೊದಲ ಸ್ವದೇಶಿ ನಿರ್ಮಿತ ವಿಮಾನ ವಾಹಕ ಐಎನ್’ಎಸ್ ವಿಕ್ರಾಂಕ್ INS Vikranth ಇಂದು ಲೋಕಾರ್ಪಣೆಗೊಂಡಿದ್ದು, ಸಮಸ್ತ ಭಾರತೀಯರ ಹೆಮ್ಮೆಯ ಪ್ರತೀಕವಾಗಿ ಇದು ಸಮರ್ಪಣೆಗೊಂಡಿದೆ.
A short film on the first indigenous aircraft carrier #INSVikrant traces the glorious history & might of the of the Indian Naval forces & its rich maritime legacy, nurtured over the years!@indiannavy pic.twitter.com/4gN1M2xFqS
— PIB India (@PIB_India) September 2, 2022
ಕೊಚ್ಚಿಯ ನೌಕಾಪಡೆಯ ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು PM Narendra Modi ಇಂದು ಇದನ್ನು ದೇಶಕ್ಕೆ ಸಮರ್ಪಣೆ ಮಾಡಿದ್ದಾರೆ.
ಕಾರ್ಯಕ್ರಮಕ್ಕೂ ಮುನ್ನ ಕೊಚ್ಚಿ ಬಂದರು ತಾಣಕ್ಕೆ ಆಗಮಿಸಿದ ಪ್ರಧಾನಿಯವರಿಗೆ ಗೌರವ ವಂದನೆ ಸಲ್ಲಿಸಲಾಯಿತು.


- ಅತ್ಯಾಧುನಿಕ ಯಾಂತ್ರೀಕೃತಗೊಂಡ ವೈಶಿಷ್ಟ್ಯಗಳೊಂದಿಗೆ ನಿರ್ಮಾಣ
- ಭಾರತದ ಕಡಲ ಇತಿಹಾಸದಲ್ಲಿ ಈವರೆಗೆ ನಿರ್ಮಿಸಲಾದ ಅತಿದೊಡ್ಡ ಹಡಗು
- ಇದು ದೊಡ್ಡ ಪ್ರಮಾಣದ ಸ್ಥಳೀಯ ಉಪಕರಣ ಹಾಗೂ ಯಂತ್ರೋಪಕರಣಗಳನ್ನು ಹೊಂದಿದೆ
- ದೇಶದ ಪ್ರಮುಖ ಕೈಗಾರಿಕಾ ಮನೆಗಳು ಮತ್ತು 100 ಕ್ಕೂ ಹೆಚ್ಚು ಸಣ್ಣ, ಮಧ್ಯಮ ಮತ್ತು ಅತಿಸಣ್ಣ ಪ್ರಮಾಣದ ಕೈಗಾರಿಕೆ ಒಳಗೊಂಡಿದೆ
- 262 ಮೀಟರ್ ಉದ್ದದ ವಾಹಕವು 45,000 ಟನ್’ಗಳ ಸ್ಥಳಾಂತರ (ಹಿಂದಿನ ವಿಕ್ರಾಂತ್ ವಿಮಾನ ವಾಹಕಕ್ಕಿಂತಲೂ ದೊಡ್ಡದು)
ಇದು ಎಂಐಜಿ 29ಕೆ ಯುದ್ಧ ವಿಮಾನವನ್ನು ವಾಯು ವಿರೋಧಿ, ಮೇಲ್ಮೈ ವಿರೋಧಿ, ಭೂ ದಾಳಿಯಲ್ಲಿ ಬಳಕೆ - ಐಎನ್’ಎಸ್ ವಿಕ್ರಾಂತ್ ಸುಮಾರು 30 ವಿಮಾನಗಳನ್ನು ಒಯ್ಯುತ್ತದೆ
- ಭಾರತೀಯ ನೌಕಾ ದಾಸ್ತಾನುಗಳಲ್ಲಿ ಅತಿದೊಡ್ಡ ಯುದ್ಧನೌಕೆ
- ಈ ವಿಮಾನ ವಾಹಕ ನೌಕೆ ವಿಕ್ರಾಂತ್ 14 ಡೆಕ್-2300 ಕಂಪಾರ್ಟ್‌ಮೆಂಟ್ ಹೊಂದಿದೆ
- ಅಂದಾಜು 1500 ಯೋಧರನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ
- ಸಿಬ್ಬಂದಿಗಳ ಆಹಾರಕ್ಕಾಗಿ 10 ಸಾವಿರ ಚಪಾತಿ/ರೊಟ್ಟಿ ತಯಾರಿಸುವ ಸಾಮರ್ಥ್ಯ ಹೊಂದಿದೆ
- ಹಡಗಿನ ಗ್ಯಾಲಿ ಎಂದು ಕರೆಯಲಾಗುತ್ತದೆ











Discussion about this post