ಕಲ್ಪ ಮೀಡಿಯಾ ಹೌಸ್ | ಸೊರಬ |
ಯಾವುದೇ ರೀತಿಯ ಕಾಮ, ಕ್ರೋಧ, ಲೋಭ, ಮದ-ಮಾತ್ಸರ್ಯಗಳಲ್ಲಿದ ಮುಗ್ದ ಮನಸ್ಸಿನ ಮಕ್ಕಳು ದೇಶದ ಸತ್ಪçಜೆಗಳಾಗಿ ನಿರ್ಮಾಣವಾಗಲು ಶಿಕ್ಷಕರು ಏಣಿ-ದೋಣಿಯಾಗಿ ಕಾರ್ಯನಿರ್ವಹಿಸಬೇಕು ಎಂದು ರಿಪ್ಪನ್‌ಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಕೆ. ಶ್ರೀಪತಿ ಹಳಗುಂದ ಕರೆ ನೀಡಿದರು.
ಡಾ. ರಾಜ್ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಪಂ, ತಾಲೂಕು ಆಡಳಿತ, ತಾಪಂ ಹಾಗೂ ತಾಲೂಕು ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ವತಿಯಿಂದ ಡಾ. ಸರ್ವಪಲ್ಲಿ ರಾಧಾಕೃಷ್ಣ ಅವರ 135ನೆಯ ಜನ್ಮದಿನದ ಅಂಗವಾಗಿ ಹಮ್ಮಿಕೊಂಡ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ನಮ್ಮ ದೇಶದಲ್ಲಿ ಪತ್ರಿಕೆ ಹಂಚುತ್ತಿದ್ದ ಬಾಲಕನೊಬ್ಬ ನಮ್ಮ ದೇಶದ ರಾಷ್ಟçಪತಿಯಾಗಿದ್ದರೆ, ಚಹ ಮಾರುತ್ತಿದ್ದ ವಿದ್ಯಾರ್ಥಿಯೊಬ್ಬ ಪ್ರಧಾನಿ ಸ್ಥಾನ ಅಲಂಕರಿಸಿದ್ದಾರೆ. ಇದೇ ರೀತಿಯಲ್ಲಿ ಶಾಲೆಯಲ್ಲಿರುವ ಮಕ್ಕಳು ಮುಂದಿನ ಉಜ್ವಲ ಭವಿಷ್ಯದಲ್ಲಿ ಉತ್ತಮ ಕೀರ್ತಿವಂತರಾದ ನಾಯಕರಾಗಬಹುದು ಎಂಬ ಪ್ರಜ್ಞೆಯನ್ನಿಟ್ಟುಕೊಂಡು ಎಲ್ಲರಿಗೂ ಉತ್ತಮ ಶಿಕ್ಷಣವನ್ನು ನೀಡುವಂತೆ ಸಲಹೆ ನೀಡಿದರು.
ಶಿಕ್ಷಕ ಸರ್ಕಾರದ ಯೋಜನೆಯ ರೀತಿಯಲ್ಲಿ ಪಾಠ ಮಾಡುವುದರ ಜೊತೆಗೆ ತನ್ನ ಅಮೂಲ್ಯವಾದ ಚಿಂತನೆಗಳನ್ನು ಸಹ ಧಾರೆ ಎರೆಯಬೇಕು. ಕಲಿಯುವ ವಿದ್ಯಾರ್ಥಿಗಳಿಗೆ ಯಾವ ವಿಷಯವೂ ಕಷ್ಟಕರವಾಗದಂತೆ ಅದನ್ನು ಭೋದನೆ ಮಾಡಬೇಕು. ನಮ್ಮ ಮಾತಿನಿಂದ ಇನ್ನೊಬರಿಗೆ ನೋವಾಗದಿದ್ದರೆ ಅದೇ ಸಂಸ್ಕೃತಿಯಾಗಿದೆ. ಭಾಷೆ ಬಲ್ಲವರು ಜಗತ್ತನ್ನು ಗೆಲ್ಲಬಹುದಾಗಿದೆ. ಕಲಿಯುವ ಭಾಷೆ, ವಿಷಯ, ಶಿಸ್ತಿನಿಂದ ಕಲಿಯಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ತಾಪಂ ಇಒ ಕೆ.ಜಿ. ಕುಮಾರ್ ಮಾತನಾಡಿ, ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾಗಿದ್ದು, ದೇಶದ ಸತ್ಪçಜೆಗಳನ್ನು ರೂಪಿಸುವ ಜವಾಬ್ದಾರಿಯನ್ನು ಶಿಕ್ಷಕರು ನಿರ್ವಹಿಸಬೇಕು ಎಂದರು.
ಅಧ್ಯಕ್ಷ ಈರೇಶ್ ಮೇಸ್ತಿç ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿ ಸಾಧನೆಯ ಹಿಂದೆ ಗುರುವಿನ ಮಾರ್ಗದರ್ಶನವಿರುತ್ತದೆ ಎಂದರು.
ಪುರಸಭೆ ಉಪಾಧ್ಯಕ್ಷ ಮಧುರಾಯ ಜಿ. ಶೇಟ್, ಸದಸ್ಯರಾದ ಪ್ರಭು ಮೇಸ್ತಿç, ಪ್ರೇಮಾ ಟೋಕಪ್ಪ, ಅನ್ಸರ್ ಅಹಮ್ಮದ್, ಅಫ್ರೀನ್‌ಬಾನು, ಕ್ಷೇತ್ರ ಸಮನ್ವಯಾಧಿಕಾರಿ ದಯಾನಂದ ಕಲ್ಲೇರ, ನೌಕರರ ಸಂಘದ ಅಧ್ಯಕ್ಷ ಎಸ್. ಮಂಜುನಾಥ, ಲಿಂಗರಾಜಪ್ಪ ಒಡೆಯರ್, ಜಿ. ಕುಮಾರ, ಟಿ. ಓಂಕಾರಪ್ಪ., ಅರುಣಕುಮಾರ, ಕೆ.ಸಿ. ಶಿವಕುಮಾರ, ಎಚ್.ಬಸವರಾಜಪ್ಪ, ಸಿ.ಪಿ. ಸದಾನಂದ, ಶಶಿಕಲಾ, ಎಂ.ಡಿ. ಹಾಲಪ್ಪ, ಚಂದ್ಯಾನಾಯ್ಕ, ಎಂ.ಆರ್. ಶಿವಪ್ಪ, ಕೆ. ಮೋಹನ್ ದಾಸ, ಕೃಷ್ಣಾನಂದ, ಎಲ್. ಸತ್ಯನಾರಾಯಣ, ಸಿದ್ದಪ್ಪ, ಕೆ.ಸಿ. ನಾರಾಯಣಪ್ಪ, ಎನ್.ಜಿ. ರಾಜು, ಶಫಿ ಅಹ್ಮದ್, ದೀಪಕ್ ದೊಂಡೆಕರ್ ಸೇರಿದಂತೆ ಹಲವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post