ಕಲ್ಪ ಮೀಡಿಯಾ ಹೌಸ್ | ಸಾಗರ |
ಪಟ್ಟಣದ ಶ್ರೀನಗರದಲ್ಲಿ 46ನೇ ವರ್ಷದ ಗಣೇಶ ವಿಸರ್ಜನೆ ಗುರುವಾರ ಅದ್ದೂರಿಯಾಗಿ ನಡೆಯಿತು.
ಶ್ರೀನಗರ ಯುವಜನ ಸಂಘ ಹಾಗೂ ಕ್ರೀಡಾ ಮತ್ತು ಸಾಂಸ್ಕೃತಿ ಸಮಿತಿಯವರು ಕಳೆದ ಭಾನುವಾರ ಗಣಹೋಮ , ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕ್ರೀಡಾ ಚಟುವಟಿಕೆ ನಡೆಸಿಕೊಟ್ಟರು.
ಗಮನ ಸೆಳೆದ ಬೆಂಕಿಯಾಟ ಪ್ರದರ್ಶನ:
ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದ ಬೆಂಕಿಯಾಟ ಪ್ರದರ್ಶನ ಕಳೆದ 2 ವರ್ಷ ಕೊರೋನಾ ಸಾಂಕ್ರಾಮಿಕ ರೋಗದಿಂದ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆದರೆ ಈ ಬಾರಿ ಅದ್ದೂರಿಯಾಗಿ ಬೆಂಕಿಯಾಟ ಪ್ರದರ್ಶನವನ್ನ ಸಾರ್ವಜನಿಕರು ಕಣ್ತುಂಬಿಕೊಂಡರು.
ನಗರದ ಹೃದಯಭಾಗ ಸಾಗರ ಹೋಟೆಲ್ ಸರ್ಕಲ್ ಹಾಗೂ ಪೋಲಿಸ್ ಸ್ಟೇಷನ್ ಸರ್ಕಲ್ ನಲ್ಲಿ ಹಲವು ಜನ ಬೆಂಕಿಯಾಟ ಪ್ರದರ್ಶನವನ್ನು ವೀಕ್ಷಿಸಿದರು.
ಬೆಂಕಿಯಾಟ ಪ್ರದರ್ಶನದಲ್ಲಿ ಎಂ. ಜಿ. ಚಂದ್ರಕಾಂತ್, ಹರ್ಷ, ದಯಾನಂದ್, ದೀಪು, ಚೇತನ್, ಹೇಮಂತ್,ಮಂಜು, ದಿಗಂತ್, ಅಮಿತ್, ಮನೋಜ್, ಸೌರವ್, ಕಿರಣ್, ಗಂಗಾಧರ್, ಡ್ಯಾನಿ ಇನ್ನಿತರರು ಉಪಸ್ಥಿತರಿದ್ದರು.
Also read: ರಾಷ್ಟಮಟ್ಟದ ಹಲವು ಪ್ರವೇಶ ಪರೀಕ್ಷೆಗಳಲ್ಲಿ ಸಂಜನಾ ಸಾಧನೆ: ಗಣ್ಯರ ಪ್ರಶಂಸೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post