ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಜ್ಯೋತಿ ಸಮೂಹ ಸಂಸ್ಥೆಗಳ ಟ್ರಸ್ಟಿ ಎಂ. ನರಸಿಂಹನ್, ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಹಾಗೂ ಪ್ರಥಮ ರ್‍ಯಾಂಕ್ ಚಿನ್ನದ ಪದಕ ವಿಜೇತ ವೈದ್ಯೆ ಡಾ. ಸಂಜನ ಕುಮಾರ್ ಅವರಿಗೆ ಸೆ.15ರಂದು ಪ್ರತಿಷ್ಠಿತ ಬಸವನಗುಡಿ ವಿಪ್ರರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಂಗ ಸಂಸ್ಥೆಯಾದ ಬಸವನಗುಡಿ ಬ್ರಾಹ್ಮಣ ಮಹಾಸಭಾ ವತಿಯಿಂದ ಸೆ.5 ಗುರುವಾರ ಸಂಜೆ 5ಗಂಟೆಗೆ ಎನ್.ಆರ್. ಕಾಲೋನಿ ಡಾ.ಸಿ. ಅಶ್ವತ್ ಕಲಾಭವನದಲ್ಲಿ ಸಮಾರಂಭ ನಡೆಯಲಿದ್ದು, ಉದ್ಘಾಟನೆಯನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರನಹಳ್ಳಿ ನೆರವೇರಿಸುವರು.

Also read: ಲೋಕಾಯುಕ್ತ ಅಬ್ಬರ ಆರಂಭ: ಬಿಬಿಎಂಪಿ ಹಿರಿಯ ಅಧಿಕಾರಿ ಶ್ರೀನಿವಾಸ್ ಬಂಧನ
ಬಸವನಗುಡಿ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಎಸ್.ಆರ್. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸುವ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸದಸ್ಯತ್ವ ಅಭಿಯಾನ, ಬಸವನಗುಡಿ ಕ್ಷೇತ್ರದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಪದಾಧಿಕಾರಿಗಳಾದ ಉಪಾಧ್ಯಕ್ಷ ಡಿ.ವಿ. ರಾಜೇಂದ್ರ ಪ್ರಸಾದ್, ಎಚ್.ಆರ್. ಸುರೇಶ್, ಸಹಕಾರ್ಯದರ್ಶಿ ಎಚ್.ಸಿ. ಪುರುಷೋತ್ತಮ್, ಟಿ.ಎಲ್.ಎಸ್ ಕುಮಾರ್, ಆರ್. ರವಿಕುಮಾರ್ ಅವರುಗಳಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.












Discussion about this post