ಕಲ್ಪ ಮೀಡಿಯಾ ಹೌಸ್ | ಸೊರಬ |
ತಾಲ್ಲೂಕು ಗಂಗಾಮತ ಸಮಾಜಕ್ಕೆ ಕಳಂಕ ತರುವಂತಹ ಕಾರ್ಯಕ್ಕೆ ಮುಂದಾದ ವ್ಯಕ್ತಿಗಳಿಗೆ ಶೋಕಾಸ್ ನೋಟಿಸ್ ನೀಡಿದ್ದು, ಒಂದು ವಾರದೊಳಗೆ ಸಮರ್ಪಕ ಉತ್ತರ ನೀಡದಿದ್ದಲ್ಲಿ ಅವರ ಮೇಲೆ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ತಾಲ್ಲೂಕು ಗಂಗಾಮತ ಸಮಾಜದ ಅಧ್ಯಕ್ಷ ದೇವೇಂದ್ರಪ್ಪ ಚನ್ನಾಪುರ ತಿಳಿಸಿದರು.
ಸೋಮವಾರ ಪಟ್ಟಣದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ನಮ್ಮ ಸಮಾಜದ ಹಂಗಾಮಿ ಕಾರ್ಯದರ್ಶಿ ಸಂಗಮೇಶ.ಜಿ ಶಂಕ್ರಿಕೊಪ್ಪ ಹಾಗೂ ಈರಪ್ಪ ಹಿತ್ತ ಜಡೆ, ನಾಗರಾಜ ಶಕುನವಳ್ಳಿ, ಪರಶುರಾಮ ಹುರುಳಿ, ಪ್ರಭು ಕಮನವಳ್ಳಿ, ಅಶೋಕ ಜಡೆ ಇವರು ಇತ್ತೀಚಿಗೆ ನಮ್ಮ ಗಮನಕ್ಕೆ ತಾರದೆ ಪತ್ರಿಕಾಗೋಷ್ಠಿ ನಡೆಸಿ ಇಲ್ಲಸಲ್ಲದ ಆರೋಪ ಮಾಡಿದ್ದು, ಈ ಬಗ್ಗೆ ಲಿಖಿತ ಉತ್ತರ ನೀಡಬೇಕು.
ತಾಲೂಕಿನಲ್ಲಿ ಗಂಗಾಮತ ಸಮಾಜದ ಅಭಿವೃದ್ಧಿಗೆ ಪಕ್ಷಾತೀತವಾಗಿ ಸಂಘಟನಾತ್ಮಕವಾಗಿ ಶ್ರಮಿಸುತ್ತಿದ್ದು, ಮುಂಬ ರುವ ವಿಧಾನಸಭಾ ಚುನಾವಣೆಯ ಪೂರ್ವ ದಲ್ಲಿ ಸದಸ್ಯತ್ವ ನೋಂದಣಿಯನ್ನು ಪೂರ್ಣ ಗೊಳಿಸಿ, ಸದಸ್ಯರಿಂದಲೇ ನೂತನ ಪದಾಧಿ ಕಾರಿಗಳ ಆಯ್ಕೆ ನಡೆಯಲಿದೆ.
-ಸಮಾಜದ ಅಧ್ಯಕ್ಷ ದೇವೇಂದ್ರಪ್ಪ ಚನ್ನಾಪುರ

ಅಧ್ಯಕ್ಷರ ಮೇಲೆ ಅವಿಶ್ವಾಸ ನಿರ್ಣಯ ತರಲು ಹಂಗಾಮಿ ಕಾರ್ಯದರ್ಶಿಗೆ ಅಧಿಕಾರವಿರುವುದಿಲ್ಲ. ಅಧ್ಯಕ್ಷರಿಲ್ಲದ ಸಮಯದಲ್ಲಿ ಉಪಾಧ್ಯಕ್ಷರ ಸಭೆ ನಡೆಸಬಹುದೇ ಹೊರತು ಗೌರವಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲು ಬರುವುದಿಲ್ಲ ಎಂದರು. ಸಮಾಜದ ಉಪಾಧ್ಯಕ್ಷ ಈರೇಶಪ್ಪ ಮೇಸ್ತ್ರಿ ಸ೦ಘಟನಾ ಕಾರ್ಯದರ್ಶಿ ಚಿರಂಜೀವಿ ಮಂಚಿ, ನಿದೇಶಕರಾದ ಮೈಲಾರಪ್ಪಲಕ್ಕವಳ್ಳಿ, ವಿಜಯೇಂದ್ರ, ಮಂಜುನಾಥ ಹುರಳಿ, ತಿರುಪತಿ ಬಾಡದಬೈಲು, ಟೌನ್ ಅಧ್ಯಕ್ಷ ನಾಗರಾಜ ಎಲೆ, ಉಪಾಧ್ಯಕ್ಷ ಚಂದ್ರಪ್ಪ ಮಂಚಿ, ಶಾಂತಪ್ಪ ತತ್ತೂರು, ದೇವರಾಜ ಆಲಳ್ಳಿ, ಶಾಂತಪ್ಪ ಆನವಟ್ಟಿ, ಬಸವರಾಜ ತಲಗುಂದ, ಪರಶುರಾಮ ಆಲಹಳ್ಳಿ, ಪ್ರದೀಪ ಕಮೂರು, ನಾಗರಾಜ ಕುಂಶಿ, ಲೋಕೇಶ್ ಜೋಳದಗುಡ್ಡೆ, ಶಿವಕುಮಾರ್ ಸೇರಿದಂತೆ ಮತ್ತಿತರರಿದ್ದರು.











Discussion about this post