ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪಕ್ಷ ಮಾಸದ ಪ್ರಯುಕ್ತ ಅಜೇಯ ಸಂಸ್ಕತಿ ಬಳಗ (ನೊಂ.) ವತಿಯಿಂದ ಗರುಡ ಪುರಾಣ ಎಲ್ಲರಿಗಾಗಿ ಎಂಬ “ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.
ಸಂಪೂರ್ಣ ಗರುಡ ಪುರಾಣದಲ್ಲಿ ಸರಿ ಸುಮಾರು 19,000 ಶ್ಲೋಕಗಳಿದ್ದು, ಅದರಲ್ಲಿ ಜ್ಞಾನಕಾಂಡ, ಧರ್ಮಕಾಂಡ, ಹಾಗು ಕರ್ಮಕಾಂಡ (ಪ್ರೇತಕಾಂಡ) ಎಂಬ 3 ವಿಭಾಗಗಳಿವೆ. ಅವು ಕ್ರಮವಾಗಿ ವಿಶ್ವದ ಸೃಷ್ಠಿ, ಸ್ಥಿತಿ, ಹಾಗು ಲಯದ ಬಗೆಗಿನ ವಿವರಗಳನ್ನು ತಿಳಿಸುತ್ತದೆ.

Also read: ವಿದ್ಯಾರ್ಥಿನಿಗೆ ಕಿರುಕುಳ ಆರೋಪ: ಫುಡ್ ಡೆಲಿವರಿ ವ್ಯಕ್ತಿ ಬಂಧನ
ಗರುಡ ಪುರಾಣದ ಕುರಿತು:
ಸಾಮಾನ್ಯವಾಗಿ ಗರುಡ ಪುರಾಣವನ್ನು ಮನೆಯಲ್ಲಿ ಯಾವುದಾದರೋ ಸಾವು ಸಂಭವಿಸಿದಾಗ ಓದುತ್ತಾರೆ. ಏಕೆಂದರೆ ಇದು ಮಹತ್ತರವಾದ ಪುರಾಣ ವಾಗಿದ್ದು ಇದರಲ್ಲಿನ ಪ್ರೇತಕಾಂಡವು ಸ್ಮಶಾನ ವೈರಾಗ್ಯವನ್ನು ತರುವಂತಹದು, ಇದನ್ನು ಸಾವು ಸಂಭವಿಸಿದಾಗ ಓದುವುದರಿಂದ 15 ದಿನಗಳ ಅಪಾರ ಕಾರ್ಯದ ವೇಳೆಯಲ್ಲಿ ಸಂಭಂಧಿಕರಲ್ಲಿ ವೈರಾಗ್ಯವು ನೆಲೆಸಿ, ಸಾವು ಎಂಬುದು ಅಂತಹ ಮಹತ್ತರವಾದುದು ಅಲ್ಲ ಎಂಬ ಅರಿವುಂಟಾಗಿ ಮನಸ್ಸಿಗೆ ಶಾಂತಿ ಲಭಿಸಲಿ ಎಂಬ ಉದ್ದೇಶ ಅಲ್ಲದೇ, ನಮ್ಮ ಬದುಕಿನ ರೀತಿ ನೀತಿಗಳನ್ನ ನಿರ್ಧರಿಸುವುದಕ್ಕೆ, ಯಾವುದು ಸರಿ ಯಾವುದು ತಪ್ಪು ಎನ್ನುವುದನ್ನ ಆಲೋಚಿಸುವುದಕ್ಕೆ ಹಾಗೂ ನಾವು ಸರಿದಾರಿಯಲ್ಲಿ ಸಾಗುವುದಕ್ಕೆ ಬೇಕಾದ ಅನೇಕ ನಿಯಮ, ಸಂಯಮಗಳನ್ನ ಈ ಗರುಡ ಪುರಾಣ ಮಾರ್ಗದರ್ಶನ ಮಾಡುತ್ತದೆ.











Discussion about this post