ಕಲ್ಪ ಮೀಡಿಯಾ ಹೌಸ್ | ಬೆಂಗಳೂರು/ಶಿವಮೊಗ್ಗ |
ನಿನ್ನೆ ಶಿವಮೊಗ್ಗದಲ್ಲಿ ಬಂಧನಕ್ಕೆ ಒಳಗಾಗಿರುವ ಶಂಕಿತ ಉಗ್ರ ತೀರ್ಥಹಳ್ಳಿ ತಾಲೂಕಿನ ಮಾಝ್ ತಂದೆಗೆ ಹೈಕೋರ್ಟ್ 10 ಸಾವಿರ ರೂ. ದಂಡ ವಿಧಿಸಿರುವ ಬೆಳವಣಿಗೆ ಇಂದು ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಝ್ ನನ್ನು ಪೊಲೀಸರು ಬಂಧಿಸಿ, ಯಾವ ಕಾರಣಕ್ಕಾಗಿ ಬಂಧಿಸಲಾಗಿದೆ ಎಂಬುದನ್ನು ಆತನ ತಂದೆ ಮುನೀರ್’ಗೆ ತಿಳಿಸಿದ್ದರು. ಆದರೂ ಈ ವಿಚಾರವನ್ನು ಮುಚ್ಚಿಟ್ಟು, ತನ್ನ ಮಗನನ್ನು ಹುಡುಕಿಕೊಡುವಂತೆ ವಕೀಲರ ಮೂಲಕ ಹೈಕೋರ್ಟ್ಗೆ High court ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.

Also read: ಶಂಕಿತ ಉಗ್ರರ ಬಂಧನ: ಐಸಿಸಿ ಜೊತೆ ಲಿಂಕ್ ಕುರಿತಾಗಿ ತಿಳಿದು ದಿಗ್ಬ್ರಮೆ: ಸಂಸದ ರಾಘವೇಂದ್ರ ಆತಂಕ
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ವೀರಪ್ಪ ನೇತೃತ್ವದ ವಿಭಾಗೀಯ ಪೀಠಕ್ಕೆ ಮಾಜ್ ಉಗ್ರರ ಲಿಂಕ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ವಿಚಾರವನ್ನು ತಿಳಿದು ಕೆಂಡಾಮಂಡಲವಾಗಿದೆ. ನಿಮ್ಮ ಮಗ ಉಗ್ರರ ಲಿಂಕ್ ಪ್ರಕರಣದಲ್ಲಿ ಬಂಧನವಾಗಿರುವುದು ತಿಳಿದೂ ಸಹ ಅದನ್ನು ಮುಚ್ಚಿಟ್ಟು, ಹೇಬಿಯಸ್ ಕಾರ್ಪಸ್ ಸಲ್ಲಿಸಿರುವುದಕ್ಕೆ ನ್ಯಾಯಾಧೀಶರು ಛೀಮಾರಿ ಹಾಕಿದ್ದಾರೆ.

ಮಂಗಳೂರು ಪೂರ್ವ ಠಾಣೆಯಲ್ಲಿ ಮುನೀರ್ ದೂರು ದಾಖಲಾಗಿತ್ತು. ಸೆ.19ರಂದು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದು, ಸೆ.20ರಂದು ಮಾಝ್ ನನ್ನು ಪೊಲೀಸರು ಬಂಧಿಸಿದ್ದರು.











Discussion about this post