ಕಲ್ಪ ಮೀಡಿಯಾ ಹೌಸ್ | ಹೈದರಾಬಾದ್ |
ದುರ್ಗಾ ಮಾತೆ ಮತ್ತು ವರ್ಜಿನ್ ಮೇರಿ ಮೂರ್ತಿಯನ್ನು ಹಾನಿಗೊಳಿಸಿದ ಇಬ್ಬರು ಮುಸ್ಲಿಂ ಮಹಿಳೆಯರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಹೈದರಾಬಾದ್‌ನ ಖೈರತಾಬಾದ್ ಪ್ರದೇಶದಲ್ಲಿ ನಡೆದಿದೆ.
ಘಟನೆಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಪೊಲೀಸ್ ಠಾಣೆಯ ಎದರು ಪ್ರತಿಭಟನೆ ನಡೆಸುತ್ತಿದ್ದು, ದೇಶಾದ್ಯಂತ ಪಿಎಫ್ಐ ಮೇಲೆ ದಾಳಿ ಬೆನ್ನಲ್ಲೇ ಈ ಘಟನೆ ಜರುಗಿದೆ. ಆದರೆ ಪಿಎಫ್ಐಗೂ ಈ ಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಈ ಇಬ್ಬರು ಮಹಿಳೆಯರು ಸಹೋದರಿಯರಾಗಿದ್ದು, 22ರಿಂದ 30 ವರ್ಷದವರಾಗಿದ್ದಾರೆ. ಮೊದಲಿಗೆ ಈ ಇಬ್ಬರು ಚರ್ಚ್ ಹೊರಗೆ ಇದ್ದ ವರ್ಜಿನ್ ಮೇರಿ ಮೂರ್ತಿಯನ್ನು ಹಾನಿಗೊಳಿಸಿದ್ದಾರೆ. ನಂತರ ನವರಾತ್ರಿ ಪೆಂಡಾಲ್‌ಗೆ ನುಗ್ಗಿ ಸುತ್ತಿಗೆಯಿಂದ ದುರ್ಗಾ ಮಾತೆ ಮೂರ್ತಿ ಹಾನಿಗೊಳಿಸಿದ್ದಾರೆ. ತಡೆಯಲು ಬಂದ ಪೆಂಡಾಲ್ ಸಮಿತಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಅವರನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.
Also read: ಕಮಲಾ ನೆಹರು ವಿದ್ಯಾರ್ಥಿನಿಯರಿಗೆ ರಾಷ್ಟ್ರೀಯ ಎನ್‌ಎಸ್‌ಎಸ್ ಯುವ ಯೋಧ ಪ್ರಶಸ್ತಿ
ವಿಚಾರಣೆಗೆ ಮಹಿಳೆಯರು ಸಹಕರಿಸುತ್ತಿಲ್ಲ. ಯಾವುದೇ ಮಾಹಿತಿ ನೀಡುತ್ತಿಲ್ಲ. ಅವರು ಮಾನಸಿಕ ಅಸ್ವಸ್ಥರಂತೆ ಕಾಣುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post