ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಎಲ್ಲಾ ಬಡವರಿಗೂ ಮನೆ ಹಂಚಿಕೆಯಾಗುತ್ತದೆ. ಆದರೆ, ಅವರು ಕಾಲಕಾಲಕ್ಕೆ ನೀಡುವ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ. K S Eshwarappa
ಗೋಪಿಶೆಟ್ಟಿಕೊಪ್ಪದಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯಡಿಯಲ್ಲಿ 1836 ಮನೆಗಳ ನಿರ್ಮಾಣದ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ವತಿಯಿಂದ ಹಣ ಬಿಡುಗಡೆಯಾಗಲಿದ್ದು, ಫಲಾನುಭವಿಗಳು ನಿಗಧಿಪಡಿಸಿದ ಮೊತ್ತವನ್ನು ಪಾವತಿಸಬೇಕು. ತಪ್ಪಿದಲ್ಲಿ ಮನೆ ರದ್ದಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಇತರೆ ಫಲಾನುಭವಿಗಳು 80,000ರೂ, ಎಸ್‌ಸಿ, ಎಸ್‌ಟಿ ಪಂಗಡದವರು 50,000 ಹಣ ಸಂದಾಯ ಮಾಡುವಂತೆ ಮನವಿ ಮಾಡಿದರು.

Also read: ಭದ್ರಾವತಿ: ಪ್ರೇಕ್ಷಕರ ಮನಸೊರೆಗೊಂಡ ದಸರಾ ಜಾನಪದ ಉತ್ಸವ























Discussion about this post