ಕಲ್ಪ ಮೀಡಿಯಾ ಹೌಸ್ | ಕೊಡಚಾದ್ರಿ/ಶಿವಮೊಗ್ಗ |
ಆದಿಗುರು ಶಂಕರಾಚಾರ್ಯರು #Shankaracharya ತಪಸ್ಸು ಮಾಡಿದ ಕೊಡಚಾದ್ರಿಯ #Kodachadri ಸರ್ವಜ್ಞ ಪೀಠ ಹಾಗೂ ಜಗನ್ಮಾತೆ ಮೂಕಾಂಬಿಕೆಯ ಕೊಲ್ಲೂರು #Kolluru ನಡುವಿನ ಸುಲಭ ಸಂಪರ್ಕಕ್ಕಾಗಿ ಸಲ್ಲಿಸಲಾಗಿದ್ದ ರೋಪ್ ವೇ #Ropeway ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.
Also Read: ಮೈಸೂರು-ತಾಳಗುಪ್ಪ ರೈಲು ಇನ್ನುಮುಂದೆ ಕುವೆಂಪು ಎಕ್ಸ್’ಪ್ರೆಸ್
ರೋಪ್ ವೇ ನಿರ್ಮಾಣದ ಟೆಂಡರ್ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಅಸ್ತು ಎಂದಿದ್ದು, ಸಂಸದ ಬಿ.ವೈ. ರಾಘವೇಂದ್ರ #BYRaghavendra ಅವರ ಸತತ ಪ್ರಯತ್ನದ ಫಲ ಇದಾಗಿದೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಸಂಸದ ರಾಘವೇಂದ್ರ ಅವರು, ಶಂಕರಾಚಾರ್ಯರು ತಪಸ್ಸು ಮಾಡಿದ ಕೊಡಚಾದ್ರಿಯ ಸರ್ವಜ್ಞಪೀಠ ಹಾಗೂ ಮೂಕಾಂಬಿಕೆಯ ಆರಾಧಾನ ಸ್ಥಳ ಕೊಲ್ಲೂರು ನಡುವಿನ ರೋಪ್ವೇ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಕೇಂದ್ರ ಸರ್ಕಾರ ಟೆಂಡರ್ ಪ್ರಕ್ರಿಯೆಗೆ ಗ್ರೀನ್ ಸಿಗ್ನಲ್ ನೀಡಿರುವುದು ಒಳ್ಳೆಯ ಬೆಳವಣಿಗೆ. ಪರಿಸರಕ್ಕೆ ಹಾನಿಯಾಗದಂತೆ ಯೋಜನೆ ಜಾರಿಗೊಳಿಸಲಾಗುವುದು ಎಂದಿದ್ದಾರೆ.
ಎಲ್ಲಿಂದ ಎಲ್ಲಿಗೆ ಸಂಪರ್ಕ?
ಶಂಕರಾಚಾರ್ಯರು ತಪಸ್ಸು ಮಾಡಿದ ಕೊಡಚಾದ್ರಿಯ ಸರ್ವಜ್ಞ ಪೀಠ ಹಾಗೂ ಮೂಕಾಂಬಿಕೆಯ ಆರಾಧನ ಸ್ಥಳ ಕೊಲ್ಲೂರು ನಡುವೆ ಈ ರೋಪ್ ವೇ ನಿರ್ಮಾಣವಾಗಲಿದೆ. ಸಂಸದ ರಾಘವೇಂದ್ರ ಅವರ ಕನಸಿನ ಮಹತ್ವದ ಯೋಜನೆ ಇದಾಗಿದ್ದು, ಮಲೆನಾಡಿನ #Malnad ಮೊಟ್ಟ ಮೊದಲ ರೋಪ್ ವೇ #Ropeway ಎಂಬ ಖ್ಯಾತಿಗೂ ಸಹ ಪಾತ್ರವಾಗಲಿದೆ.
ಈ ರೋಪ್ ವೇನಿಂದ ಪ್ರಯೋಜನವೇನು?
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯಕ್ಕೆ ನಿತ್ಯ ಸಾವಿರಾರು ಮಂದಿ ಭೇಟಿ ನೀಡುತ್ತಾರೆ. ಇಲ್ಲಿಂದ 40 ಕಿಮೀ ದೂರದಲ್ಲಿ ಶಂಕರಾಚಾರ್ಯರು ತಪಸ್ಸು ಮಾಡಿದ ಸರ್ವಜ್ಞ ಪೀಠವಿದೆ. ಕೊಲ್ಲೂರಿಗೆ ಭೇಟಿ ನೀಡುವ ಭಕ್ತರು ಬಹುತೇಕರು ಇಲ್ಲಿಗೆ ತೆರಳುತ್ತಾರೆ. ಈ ಪ್ರದೇಶದಲ್ಲಿ ತೆರಳಲು ಜೀಪ್ ಬಳಸಬೇಕಿದ್ದು, ಇದಕ್ಕೆ ಒಂದೂವರೆ ಗಂಟೆಗೂ ಅಧಿಕ ಸಮಯ ಹಿಡಿಯತ್ತದೆ. ಈ ರೋಪ್ ವೇ ನಿರ್ಮಾಣವಾದರೆ ದೂರ 7 ಕಿಮೀಗೆ ಇಳಿಯಲಿದ್ದು, ಕೇವಲ 15 ನಿಮಿಷದಲ್ಲಿ ತಲುಪಬಹುದಾಗಿದೆ.
Also Read: ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಡಿಎ ಘೋಷಣೆ: ಸಿಎಂ ಬೊಮ್ಮಾಯಿ ಟ್ವೀಟ್
ಪ್ರವಾಸೋದ್ಯಮಕ್ಕೆ ಪೂರಕ
ಇನ್ನು, ಈ ರೋಪ್ ವೇ ನಿರ್ಮಾಣದಿಂದ ಜಿಲ್ಲೆಯ ಪ್ರವಾಸೋದ್ಯಮ #Tourism ಬೆಳವಣಿಗೆಗೆ ಸಹಕಾರಿಯಾಗಲಿದ್ದು, ಪ್ರವಾಸಿಗರ ಸಂಖ್ಯೆ ಏರಿಕೆಯಾಗಲಿದೆ. ಅಲ್ಲದೇ, ಭಕ್ತರು ಹಾಗೂ ಪ್ರವಾಸಿಗರಿಗೆ ಸಹಕಾರಿಯಾಗಲಿದ್ದು, ಸ್ಥಳೀಯ ಮಟ್ಟದಲ್ಲಿ ಉದ್ಯೋಗವೂ ಸಹ ಸೃಷ್ಠಿಯಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post