ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮುಲಾಯಂ ಸಿಂಗ್ ಯಾದವ್ Mulayam Sigh Yadav ನಿಧನಕ್ಕೆ ಶಾಸಕ ಈಶ್ವರಪ್ಪ MLA Eshwarappa ಸಂತಾಪ ಸೂಚಿಸಿದ್ದು, ಅವರು ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಾಕಷ್ಟು ಚಟುವಟಿಕೆ ಕೆಲಸಗಳನ್ನು ಮಾಡಿದ್ದರು. ಒಬ್ಬ ಉತ್ತಮ ರಾಷ್ಟ್ರನಾಯಕನನ್ನು ಕಳೆದು ಕೊಂಡಿದ್ದೇವೆ ಎಂದು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಲಾಯಂ ಸಿಂಗ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಸಂಬಂಧ ಅವರ ಭೇಟಿಗೆ ಹೋಗಿದ್ದೆವು. ಆದರೆ ಒಂದು ಸೊಳ್ಳೆನೂ ಒಳಗೆ ಹೋಗಲು ಬಿಡುವುದಿಲ್ಲ ಎಂದಿದ್ದರು.
ಅಂದು ಪುಣ್ಯ ಕ್ಷೇತ್ರದ ಅಭಿವೃದ್ಧಿಗೆ ಅಡ್ಡಿ ಬಂದಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು. ಏಕೆಂದರೆ ಇಡೀ ದೇಶದಲ್ಲಿ ಎಲ್ಲ ಪುಣ್ಯಕ್ಷೇತ್ರಗಳಿಗೆ ಮುಕ್ತಿ ಸಿಗುವ ಸಂದರ್ಭವಿದು. ಧರ್ಮ, ಸಂಸ್ಕೃತಿಯ ನೆಲೆಬೀಡಾದ ನಮ್ಮ ದೇಶ ಅನೇಕ ವರ್ಷ ಗುಲಾಮಗಿರಿಯಲ್ಲಿತ್ತು. ಆ ವೇಳೆ ನಮ್ಮ ಧರ್ಮಕ್ಕೆ, ದೇಗುಲಗಳಿಗೆ, ಹೆಣ್ಣುಮಕ್ಕಳಿಗೆ ರಕ್ಷಣೆ ಇರಲಿಲ್ಲ. ಈಗ ಸಾಕಷ್ಟು ರಕ್ಷಣೆ ಸಿಗುತ್ತಿದೆ ಎಂದರು.
Also read: ಆಯತಪ್ಪಿ ಬಿದ್ದ ವಿದ್ಯಾರ್ಥಿನಿ ಮೇಲೆ ಹರಿದ ಬಸ್: ಗಂಭೀರ ಗಾಯ
ಮುಲಾಯಂ ಸಿಂಗ್ ಯಾದವ್ ಪಕ್ಷ ಕಟ್ಟಲು ಹೋರಾಟ ಮಾಡಿದರು. ಆದರೆ ಅವರ ಮಗ ಅಖಿಲೇಶ್ ವಿಫಲರಾಗಿದ್ದಾರೆ. ವ್ಯಕ್ತಿಯ ಮೇಲೆ ಪಕ್ಷ ನಿಲ್ಲೋದು ಕಷ್ಟ. ರಾಮ ಲೋಹಿಯಾ ನಿಧನದ ನಂತರ ಅವರ ಪಕ್ಷವೂ ಹೋಯಿತು. ದೇಶ, ಸಂಸ್ಕೃತಿಯ ರಕ್ಷಣೆ ಉದ್ದೇಶದಲ್ಲಿ ಪಕ್ಷ ಕಟ್ಟಿದರೆ ಆ ಪಕ್ಷ ಉಳಿಯುತ್ತದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post