ಕಲ್ಪ ಮೀಡಿಯಾ ಹೌಸ್ | ಪತ್ತನಂತಿಟ್ಟ(ಕೇರಳ) |
ವಾಮಾಚಾರಕ್ಕಾಗಿ ಇಬ್ಬರು ಮಹಿಳೆಯರನ್ನು ನರ ಬಲಿ ನೀಡಿರುವ, ದೇಶವೇ ಬೆಚ್ಚಿ ಬೀಳುವ ದಾರುಣ ಘಟನೆ ಕೇರಳದಲ್ಲಿ ನಡೆದಿದೆ.
ಪತ್ತನಂತಿಟ್ಟ ಜಿಲ್ಲೆಯ ಮನೆಯೊಂದರಲ್ಲಿ ಸಮಾಧಿ ಮಾಡಲಾಗಿದ್ದ ಎರಡು ಶವಗಳು ಪತ್ತೆಯಾಗಿದ್ದವು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ ಈ ಕುರಿತ ಸ್ಪೋಟಕ ಮಾಹಿತಿ ಲಭ್ಯವಾಗಿದೆ.
ಪತ್ತನಂತಿಟ್ಟ ಜಿಲ್ಲೆಯ ಎಳಂತೂರಿನ ಪದ್ಮ ಮತ್ತು ರೊಸ್ಲಿ ಎಂಬ ಇಬ್ಬರು ಮಹಿಳೆಯರು ಲಾಟರಿ ಟಿಕೇಟ್ ಮಾರಾಟ ಮಾಡಿ, ಜೀವನ ಸಾಗಿಸುತ್ತಿದ್ದರು. ಇವರನ್ನು ಭಗವಲ್ ಸಿಂಗ್ ಮತ್ತು ಲೈಲಾ ಎಂಬ ದುಷ್ಕರ್ಮಿಗಳು ತಮ್ಮ ಆರ್ಥಿಕ ಏಳಿಗೆಗಾಗಿ ವಾಮಾಚಾರ ಮಾಡಿಸಿ, ನರಬಲಿ ನೀಡಿದ್ದಾರೆ ಎಂದು ವರದಿಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ನರಬಲಿ ಕೊಡಲು ಸೂಚಿಸಿದ ಶಫಿ ಮತ್ತು ದಂಪತಿ ಭಗವಾಲ್ ಸಿಂಗ್ ಮತ್ತು ಲೈಲಾ ಅವರುಗಳನ್ನು ಲಭ್ಯವಾಗಿರುವ ಸಿಸಿ ಟಿವಿ ದೃಶ್ಯಾವಳಿಗಳನ್ನು ಆಧರಿಸಿ ಬಂಧಿಸಲಾಗಿದೆ.
ಈ ಕುರಿತಂತೆ ಮಾಧ್ಯಮಗಳಿಗೆ ಮಾತನಾಡಿರುವ ಕೊಚ್ಚಿ ನಗರ ಪೊಲೀಸ್ ಆಯುಕ್ತರು, ನರಬಲಿ ಆಚರಣೆ ನಡೆಸಿದ ಮೂವರನ್ನು ನಾವು ಬಂಧಿಸಿದ್ದೇವೆ.ಅವರು ವಾಮಾಚಾರಕ್ಕಾಗಿ ಇಬ್ಬರು ಮಹಿಳೆಯರನ್ನು ಭೀಕರವಾಗಿ ಕೊಂದಿದ್ದಾರೆ ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post