ಕಲ್ಪ ಮೀಡಿಯಾ ಹೌಸ್ | ಮಂಡ್ಯ |
ಟ್ಯೂಷನ್‌ಗೆ ಹೋಗಿದ್ದ 10 ವರ್ಷದ ಬಾಲಕಿಯ ಮೇಲೆ ಅಲ್ಲಿನ ಮೇಲ್ವಿಚಾರಕ ಅತ್ಯಾಚಾರವೆಸಗಿ ಅತ್ಯಂತ ಘೋರವಾಗಿ ಬಾಲಕಿಯನ್ನು ಕೊಂದ ಬೆಚ್ಚಿಬೀಳಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಜಿಲ್ಲೆಯ ಮಳವಳ್ಳಿಯಲ್ಲಿ ಮಂಗಳವಾರ ಟ್ಯೂಷನ್‌ಗೆ ಹೋಗಿದ್ದ ಬಾಲಕಿ ನೀರಿನ ಸಂಪ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಳು. ಇದು ಹಲವು ಅನುಮಾನಗಳಿಗೆ ಕಾರಣವಾಗಿದ್ದರೂ, ಪೊಲೀಸರು ಸೆಕ್ಷನ್ 302ರ ಅಡಿಯಲ್ಲಿ ದೂರು ದಾಖಲಿಸಿಕೊಂಡಿದ್ದರು. ಆದರೆ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಆಕೆಯ ಮೇಲೆ ಅತ್ಯಾಚಾರವೆಸಗಿ ಬರ್ಭರವಾಗಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.
ಹೀಗಾಗಿ ಸೆಕ್ಷನ್ 302ರ ಜೊತೆಯಲ್ಲಿ 307 ಹಾಗೂ ಪೋಕ್ಸೋ ಕಾಯ್ದೆಗಳನ್ನು ಪ್ರಕರಣದಲ್ಲಿ ಸೇರಿಸಲಾಗಿದೆ.
ಘಟನೆ ಹಿನ್ನೆಲೆ ಏನು?
ಕಳೆದ ಮಂಗಳವಾರ ಮೇಲ್ವಿಚಾರಕನಿಗೆ ಫೋನ್ ಮಾಡಿದ್ದ ಬಾಲಕಿ ಟ್ಯೂಷನ್ ಎಷ್ಟು ಗಂಟೆಗೆ ಎಂದು ವಿಚಾರಿಸಿದರು. ಸಂಜೆ ೫ಗಂಟೆಯಿಂದ ತರಗತಿಯಿದ್ದರೂ ಬೆಳಗ್ಗೆ 11:30ಕ್ಕೆ ಆಕೆಗೆ ಬರುವಂತೆ ಆರೋಪಿ ಕಾಂತರಾಜು ಹೇಳಿದ್ದನು. ಆ ಸಮಯಕ್ಕೆ ಬಂದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಈತ ಅರೆಪ್ರಜ್ಞಾವಸ್ಥೆಯಲ್ಲಿ ನರಳುತ್ತಿದ್ದ ಬಾಲಕಿಯ ಕತ್ತು ಹಿಸುಕಿದ್ದು ಮಾತ್ರವಲ್ಲದೆ ಕಲ್ಲಿನಿಂದ ತಲೆಯನ್ನು ಜಜ್ಜಿದ್ದಾನೆ. ಆ ನಂತರ ಆಕೆಯ ದೇಹವನ್ನು ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಸಂಪ್ ಒಳಗೆ ಎಸೆದು ಪರಾರಿಯಾಗಿದ್ದಾನೆ.
ಇಷ್ಟು ಮಾತ್ರವಲ್ಲದೆ ತನಗೇನು ತಿಳಿದಿಲ್ಲ ಎಂಬಂತೆ ಬಾಲಕಿಯ ಕುಟುಂಬಸ್ಥರ ಜೊತೆ ಆಕೆಗಾಗಿ ಹುಡುಕಾಟ ನಡೆಸಿ ಪೊಲೀಸರ ಎದುರಿನಲ್ಲೂ ಅಮಾಯಕನಂತೆ ವರ್ತಿಸಿದ್ದಾನೆ.
ಆದರೆ ಈತನ ಮೇಲೆ ಅನುಮಾನಗೊಂಡ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಬಾಯಿಬಿಟ್ಟಿದ್ದಾನೆ. ಇನ್ನು ಮೃತ ಬಾಲಕಿಯ ಕುಟುಂಬಸ್ಥರು, ಸ್ಥಳೀಯರು ಹಾಗೂ ಸಂಘ-ಸಂಸ್ಥೆಗಳು ವ್ಯಾಪಕ ಪ್ರತಿಭಟನೆ ನಡೆಸಿದ್ದು, ಆರೋಪಿಯನ್ನು ಶೀಘ್ರ ಗಲ್ಲಿಗೇರಿಸುವಂತೆ ಆಗ್ರಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post