ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಜೈಲ್ ರಸ್ತೆಯ ಇಡ್ಲಿ ಹೌಸ್ ಪಕ್ಕದ ತಿರುವಿನ ವೆಂಕಟೇಶ ನಗರ ತಿರುವಿನ ಆರಂಭದ ಮನೆಯೊಂದರ ಮುಂದೆ ಇಂದು ಮುಂಜಾನೆ ಯುವಕನೋರ್ವನನ್ನು ಕೊಲೆ ಮಾಡಲಾಗಿದೆ.
ಮೃತ ವ್ಯಕ್ತಿಯನ್ನು ಗಾಂಧಿನಗರದ ನಿವಾಸಿ ಹಾಗೂ ಶಿವಮೊಗ್ಗ ನಗರದ ಭಾರತ್ ನ್ಯೂರೋ ಕ್ಲಿನಿಕ್’ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಂ.ವಿ. ವಿಜಯ್ ಎಂದು ಹೇಳಲಾಗುತ್ತಿದೆ.
ಗಾಂಧಿನಗರದ ನಿವಾಸಿಯಾದ ಆತನಿಗೆ ನಿನ್ನೆ ರಾತ್ರಿ ಎರಡು ಮೂವತ್ತರ ಹೊತ್ತಿಗೆ ಆಸ್ಪತ್ರೆಯಿಂದ ಫೋನ್ ಬಂದಿದೆ ಎಂದು ಹೇಳಲಾಗಿದ್ದು ಆಗ ಆತ ಹೋಗಿz್ದÁನೆ ಎಂದು ಮೃತ ವ್ಯಕ್ತಿಯ ತಂದೆ ಹೇಳಿz್ದÁರೆ. ಆತನ ಕೆ.ಎ. 05 ಹೆಚ್.ಜಿ.775 5 ಕ್ರಮ ಸಂಖ್ಯೆಯ ಬೈಕ್ ಸಹ ಅದೇ ಸ್ಥಳದಲ್ಲಿ ನಿಂತಿದೆ. ವಿಜಯ್ ಇತ್ತೀಚೆಗೆ ವಿವಾಹ ವಿಚ್ಛೇದನ ಪಡೆದಿದ್ದರು ಎನ್ನಲಾಗಿದ್ದು, ಇನ್ನಷ್ಟು ವಿವರಗಳು ಹೊರ ಬರಬೇಕಿದೆ.
ಆತನ ಹೊಟ್ಟೆಗೆ ಚಾಕುಯಿಂದ ತಿವಿದು ಕರಳನ್ನು ಹೊರಗೆ ತೆಗೆದಿದ್ದಾರೆ ದುಷ್ಕರ್ಮಿಗಳು.
ಸ್ಥಳಕ್ಕೆ ಭೇಟಿ ನೀಡಿದ ಜಯನಗರ ಪೊಲೀಸ್ ಠಾಣೆಯ ಇನ್ಸೆö್ಪಕ್ಟರ್ ಮಾದಪ್ಪ ಹಾಗೂ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದು, ಮೃತ ವ್ಯಕ್ತಿಯ ದೇಹವನ್ನು ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















