ಕಲ್ಪ ಮೀಡಿಯಾ ಹೌಸ್ | ಮುಂಬೈ |
ಕಾರಿನಲ್ಲಿ ಮಹಿಳೆ ಜೊತೆಗೆ ಇರುವುದನ್ನು ಗಮನಿಸಿದ ಹಿನ್ನೆಲೆ ಬಾಲಿವುಡ್ ಸಿನೆಮಾ ನಿರ್ಮಾಪಕ ಪತ್ನಿ ಮೇಲೆ ಕಾರು ಹರಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.
ಸಿನೆಮಾ ನಿರ್ಮಾಪಕ ಕಮಲ್ ಕಿಶೋರ್ ಮಿಶ್ರಾ ಕಾರಿನಲ್ಲಿ ಮತ್ತೊಬ್ಬ ಮಹಿಳೆ ಜೊತೆಗೆ ಇರುವುದನ್ನು ಪತ್ನಿ ಗಮನಿಸಿದರೆಂಬ ಗಡಿಬಿಡಿಯಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಮಿಶ್ರಾ ಅವರ ಪತ್ನಿ ಗಾಯಗೊಂಡಿದ್ದಾರೆ.
ಮಿಶ್ರಾ ಅವರ ಪತ್ನಿಯು ಪತಿಯನ್ನು ಹುಡುಕುತ್ತ ಬಂದ ಸಂದರ್ಭ ಪಾರ್ಕಿಂಗ್ ಪ್ರದೇಶದಲ್ಲಿ ಬೇರೆ ಮಹಿಳೆಯ ಜೊತೆ ಕಾರಿನಲ್ಲಿ ಇರುವುದನ್ನು ಗಮನಿಸಿದ್ದಾರೆ. ತಡೆಯಲು ಬಂದ ಪತ್ನಿಯಿಂದ ತಪ್ಪಿಸಿಕೊಳ್ಳಲು ಮಿಶ್ರಾ ಕಾರನ್ನು ಜೋರಾಗಿ ಓಡಿಸಿದ್ದಾರೆ. ಈ ಸಂದರ್ಭ ಪತ್ನಿಗೆ ಕಾರು ಗುದ್ದಿದೆ. ಪತ್ನಿಯ ಕೈ, ಕಾಲು ಹಾಗೂ ತಲೆಗೆ ಗಾಯವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಮಿಶ್ರಾ ವಿರುದ್ಧ ಅವರ ಪತ್ನಿ ದೂರು ದಾಖಲಿಸಿದ್ದು, ಅಂಬೋಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post