ಕಲ್ಪ ಮೀಡಿಯಾ ಹೌಸ್ | ಶಿರಾಳಕೊಪ್ಪ |
ಇಲ್ಲಿಗೆ ಸಮೀಪದ ಬಿಳುವಾಣಿ ಬಸ್ ನಿಲ್ದಾಣದ ಬಳಿ ಸ್ಕಿಡ್ ಆದ ಬೈಕ್ ರಸ್ತೆ ಬದಿಗೆ ಹಾರಿ ಬಿದ್ದಿದ್ದು, ಸವಾರನಿಗೆ ಗಂಭೀರ ಗಾಯಗಳಾಗಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಶಿರಾಳಕೊಪ್ಪದಿಂದ ಸೊರಬಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಯುವಕ ಬಿಳುವಾಣಿ ಬಸ್ ನಿಲ್ದಾಣದ ಬಳಿಯಲ್ಲಿ ರಸ್ತೆ ಗುಂಡಿ ಹಾರಿಸಿದ ಪರಿಣಾಮ ಬೈಕ್ ಸಮೇತ ಪಕ್ಕದ ಹಳ್ಳಕ್ಕೆ ಹಾರಿ ಬಿದ್ದಿದ್ದಾನೆ.
ಬೃಹತ್ ಗಾತ್ರದ ಕಲ್ಲಿಗೆ ಯುವಕನ ತಲೆ ಬಡಿದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಆತ ಗಂಭೀರ ಸ್ಥಿತಿಯಲ್ಲಿದ್ದಾನೆ. ಸ್ಥಳೀಯರು ತತಕ್ಷಣವೇ ಆತನನ್ನು ಶಿರಾಳಕೊಪ್ಪ ಆಸ್ಪತ್ರೆಗೆ ರವಾನಿಸಿದ್ದಾರೆ.
ಸ್ಥಳೀಯರ ಮಾಹಿತಿಯಂತೆ ಯುವಕ ಶಿರಾಳಕೊಪ್ಪ ನಿವಾಸಿಯಾಗಿದ್ದು, ಸೊರಬದಲ್ಲಿ ಮೀನು ವ್ಯಾಪಾರ ಮಾಡುವ ವೃತ್ತಿ ಮಾಡುತ್ತಿದ್ದಾನೆ ಎನ್ನಲಾಗಿದೆ.
Also read: ಸೂಕ್ಷ್ಮ ವಿಚಾರ ಇಟ್ಟುಕೊಂಡು ಚುನಾವಣಾ ರಾಜಕೀಯ ಸರಿಯಲ್ಲ: ಹೆಚ್.ಡಿ. ಕುಮಾರಸ್ವಾಮಿ
ಮಿತಿ ಮೀರಿದ ವೇಗದಲ್ಲಿ ಬೈಕ್ ಚಲಾಯಿಸಿದ್ದೇ ಈ ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಶಿರಾಳಕೊಪ್ಪ ಸೊರಬ ನಡುವಿನ ರಸ್ತೆ ಗುಂಡಿಗಳಿಂದ ಕೂಡಿ ಹೋಗಿದ್ದು, ಇದರಿಂದಾಗಿ ಈ ರಸ್ತೆಯಲ್ಲಿ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಲೇ ಇದ್ದು, ಸಂಬಂಧಿಸಿದವರು ಶೀಘ್ರ ರಸ್ತೆ ದುರಸ್ತಿ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post