ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯ ರಾಜಧಾನಿಯ ಎಲ್ಲ ಕಡೆಗಳಲ್ಲಿ ನಾಡಿನ ಧಾರ್ಮಿಕ ಹಾಗೂ ಸಾಂಸ್ಕೃತಿಕತೆಯನ್ನು ಸದಾ ಕಾಲ ಜೀವಂತವಾಗಿ ಇರಿಸಿರುವ ನಾಡಪ್ರಭು ಕೆಂಪೇಗೌಡರಿಗೆ ನಾವೆಲ್ಲರೂ ಸದಾ ಅಭಾರಿಯಾಗಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕೆಂಪೇಗೌಡರ 108 ಅಡಿಯ ಕಂಚಿನ ಪ್ರತಿಮೆಯನ್ನು ಉದ್ಘಾಟಿಸಿದ ನಂತರ ಮಾತನಾಡಿರುವ ಅವರು, ಗವಿ ಗಂಗಾಧರೇಶ್ವರ ದೇವಾಲಯ, ಬಸವನಗುಡಿಯ ಗಣಪತಿ, ಬಸವಣ್ಣ ದೇವಾಲಯ, ಲಾಲ್ ಬಾಗ್ ಸೇರಿದಂತೆ ಬೆಂಗಳೂರಿನಾದ್ಯಂತ ನಾಡಿನ ಧಾರ್ಮಿಕತೆ ಹಾಗೂ ಸಂಸ್ಕೃತಿಯನ್ನು ಸದಾ ಜೀವಂತ ಇರುವಂತೆ ಮಾಡಿದ್ದಾರೆ ಎಂದರು.
ನೂರಾರು ವರ್ಷಗಳ ಹಿಂದೆ ಅವರ ಕೈಗೊಂಡ ನಿರ್ಧಾರ ಸದಾ ಜೀವಂತವಾಗಿದ್ದು, ಬೆಂಗಳೂರಿನ ಈ ಪರಿಯ ಅಭಿವೃದ್ಧಿಗೆ ಕೆಂಪೇಗೌಡರ ದೂರದೃಷ್ಠಿಯೇ ಕಾರಣ. ಇಂತಹ ನಾಯಕರಿಗೆ ನಾವು ಸದಾ ಆಭಾರಿಯಾಗರಬೇಕು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post