Read - < 1 minute
ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಲ್ಲಿ ನಿರ್ಮಿಸಿರುವ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಅನಾವರಣಗೊಳಿಸಿದ್ದು, ಇದು ವಿಶ್ವ ದಾಖಲೆಯನ್ನು ಬರೆದಿದೆ.
ಏನು ಈ ಪ್ರತಿಮೆ ವಿಶೇಷತೆ?
- 108 ಅಡಿ ಎತ್ತರ ಬೃಹತ್ ಪ್ರತಿಮೆ
- 100 ಟನ್ ಕಂಚು, 120 ಟನ್ ಉಕ್ಕು ಬಳಕೆ
- ಪ್ರತಿಮೆಯ ಖಡ್ಗವೇ 4 ಸಾವಿರ ಕೆಜಿ ತೂಕ
- ಪ್ರಗತಿಯ ಪ್ರತಿಮೆ ಎಂದು ನಾಮಾಂಕಿತ
- ನಗರ ನಿರ್ಮಾತೃ ಒಬ್ಬರ ವಿಶ್ವದ ಅತಿ ಎತ್ತರದ ಪ್ರತಿಮೆ
- ನಿರ್ಮಾಣಕ್ಕೆ 84 ಕೋಟಿ ರೂ. ವೆಚ್ಚ
- ರಾಮ್ ಸುತಾರ್ ಕ್ರಿಯೇಶನ್ಸ್ ಕಂಪೆನಿ ನಿರ್ಮಾಣ
- 23 ಎಕರೆ ಪ್ರದೇಶದಲ್ಲಿ ಕೆಂಪೇಗೌಡ ಥೀಮ್ ಪಾರ್ಕ್ ನಿರ್ಮಾಣ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post