ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಕ್ಕಳಿಗೆ ಹಲ್ಲಿನ ಆರೋಗ್ಯ ಅತ್ಯಂತ ಮುಖ್ಯವಾಗಿದ್ದು, ಪ್ರತಿನಿತ್ಯ ಬ್ರಷ್ ಮಾಡುವ ಜೊತೆಯಲ್ಲಿ ಹಲ್ಲಿನ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಸುಬ್ಬಯ್ಯ ಡೆಂಟಲ್ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎಸ್. ಸುರೇಶ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಮಕ್ಕಳ ದಿನಾಚರಣೆಯ ಅಂಗವಾಗಿ ಗುರುಪುರ ಸರ್ಕಾರ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಡ್ರಾಯಿಂಗ್ ಸ್ಪರ್ಧಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳಿಗೆ ಸುಮಾರು 5 ವರ್ಷ ಆಗುವವರೆಗೂ ಅವರಿಗೆ ಬ್ರಷ್ ಮಾಡುವಲ್ಲಿ ಪೋಷಕರು ಗಮನಿಸಬೇಕು. ಹೆಚ್ಚಿನ ಪ್ರಮಾಣದ ಫ್ಲೋರೈಡ್ ಅನ್ನು ನುಂಗುವುದನ್ನು ತಪ್ಪಿಸಲು ಹೆಚ್ಚುವರಿ ಟೂತ್ ಪೇಸ್ಟ್ ಅನ್ನು ಉಗುಳಲು ಮಕ್ಕಳಿಗೆ ಪೋಷಕರು ಕಲಿಸಬೇಕು. ಸ್ವಲ್ಪ ಟೂತ್ ಪೇಸ್ಟ್ ಬಾಯಿಯಲ್ಲಿ ಬಿಟ್ಟರೆ ಹಲ್ಲುಗಳಿಗೆ ಒಳ್ಳೆಯದು. ಇದಕ್ಕೆ ಕಾರಣ ದಿ ಫ್ಲೋರೈಡ್ ಟೂತ್ ಪೇಸ್ಟ್ ಹಲ್ಲಿನ ಪ್ಲೋರಾಪಟೈಟ್ ಸ್ಫಟಿಕಗಳೊಂದಿಗೆ ಪ್ರತಿಕ್ರಿಯಿಸಲು ಸಾಕಷ್ಟು ಸಮಯ ಸಿಗುತ್ತದೆ. ಅದು ನಿಮ್ಮ ಮಗುವಿನ ಹಲ್ಲುಗಳನ್ನು ಇನ್ನಷ್ಟು ಬಲಗೊಳಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಡಾ. ವಿಜಯ್ ಅಮರನಾಥ್, ಡಾ.ಹೃದಯಾ, ಡಾ. ಜುರೈಜ್, ಇಂಟರ್ನ್ಸ್ ಹಾಗೂ ವಿದ್ಯಾರ್ಥಿಗಳು, ವೈದ್ಯಕೀಯ ಹಾಗೂ ವೈದ್ಯಕೀಯೇತರ ಸಿಬ್ಬಂದಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post