ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ತಾನು ಪ್ರೇಮಿಸಿದ್ದ ಯುವತಿಯನ್ನು ಕೊಂದು ದೇಹವನ್ನು 35 ತುಂಡು ಮಾಡಿದ್ದ ಮನುಷ್ಯ ರೂಪದ ರಾಕ್ಷಸ ಅಫ್ತಾಬ್, ಕೊಲೆಯನ್ನು ಮುಚ್ಚಿಡಲು ಮಾಡಿದ್ದ ಮಾಸ್ಟರ್ ಪ್ಲಾನ್ ಈಗ ಒಂದೊಂದೇ ಹೊರಬರುತ್ತಿದ್ದು, ಎಂತಹವರೂ ಸಹ ಬೆಚ್ಚಿ ಬೀಳುವಂತಿದೆ.
ಹೈದರಾಬಾದ್ ಮೂಲದ ಅಫ್ತಾಬ್ ಹಾಗೂ ಶ್ರದ್ಧಾ ಪರಸ್ಪರ ಪ್ರೀತಿಸಿ, ನವದೆಹಲಿಯಲ್ಲಿ ಲಿವ್ ಇನ್ ಟುಗೆದರ್’ನಲ್ಲಿದ್ದರು. ತಾನು ಪ್ರೀತಿಸಿದ್ದ ಯುವತಿಯನ್ನು ಕತ್ತು ಹಿಸುಕಿ ಕೊಂದು, ಆಕೆಯ ದೇಹವನ್ನು 35 ತುಂಡುಗಳನ್ನಾಗಿ ಕತ್ತರಿಸಿದ ಪ್ರಕರಣ ಬರೋಬ್ಬರಿ ಆರು ತಿಂಗಳ ನಂತರ ಬೆಳಕಿಗೆ ಬಂದಿದೆ.
ಕೊಲೆಗೆ ಕಾರಣವೇನು?
ಅನ್ಯ ಧರ್ಮದ ಪ್ರೀತಿಯಾದ ಕಾರಣ ಹೈದರಾಬಾದ್’ನಿಂದ ನವದೆಹಲಿಗೆ ಬಂದು ಲಿವ್ ಇನ್ ಟುಗೆದರ್’ನಲ್ಲಿದ್ದ ಈ ಇಬ್ಬರೂ ಒಂದು ಬಾಡಿಗೆ ಮನೆ ಮಾಡಿಕೊಂಡಿದ್ದರು. ತನ್ನನ್ನು ಮದುವೆ ಆಗುವಂತೆ ಶ್ರದ್ಧಾ ಅಫ್ತಾಬ್’ನನ್ನು ನಿರಂತರವಾಗಿ ವಿನಂತಿಸುತ್ತಲೇ ಇದ್ದಳು. ಆದರೆ, ಅಫ್ತಾಬ್ ಇದನ್ನು ತಿರಸ್ಕರಿಸುತ್ತಲೇ ಬಂದಿದ್ದನು. ಈ ಬಗ್ಗೆ ಇಬ್ಬರ ನಡುವೆ ಬಹಳಷ್ಟು ಜಗಳವೂ ಸಹ ಆಗಿತ್ತು. ಹೀಗೆ ಜಗಳ ವಿಕೋಪಕ್ಕೆ ತಿರುಗಿ ಆಕೆಯನ್ನು ಕತ್ತು ಹಿಸುಕಿ ಕೊಂದು ಅಫ್ತಾಬ್ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ್ದ.
Also read: ವಾಹನ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು
ಹೊಸ ಗರಗಸ ಕೊಂಡು ತಂದಿದ್ದ
ಶ್ರದ್ಧಾಳನ್ನು ಕೊಂದ ನಂತರ ಆಕೆಯ ದೇಹವನ್ನು ಏನು ಮಾಡುವುದು ಎಂದು ಚಿಂತಿಸಿದ ಆತ ಇದಕ್ಕಾಗಿ ಅಂಗಡಿಯಿಂದ ಹೊಸ ಗರಗಸ ಕೊಂಡು ತಂದ.
ಹ್ಯೂಮನ್ ಅನಾಟಮಿ ಓದಿದ ಕೀಚಕ
ಇನ್ನು, ಆಕೆಯ ದೇಹವನ್ನು ವಿಲೇವರಿ ಮಾಡುವ ಮುನ್ನ ಅಫ್ತಾಬ್ ಇಂಟರ್ ನೆಟ್’ನಲ್ಲಿ ಹ್ಯೂಮನ್ ಅನಾಟಮಿ ಓದಿಕೊಂಡು ಆನಂತರ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ.
ಹೊಸ ಫ್ರಿಡ್ಜ್ ತಂದಿದ್ದ
ಆಕೆಯ ದೇಹ ಕೊಳೆಯದಂತೆ ಇರಿಸುವ ಸಲುವಾಗಿ ಹೊಸ ಫ್ರಿಡ್ಜ್ ಕೊಂಡು ತಂದು, ಅದರಲ್ಲಿ ಕನಿಷ್ಠ ಟೆಂಪರೇಚರ್ ಸೆಟ್ ಮಾಡಿ ಅಫ್ತಾಬ್ ಆಕೆಯ ತುಂಡರಿಸಿದ ದೇಹಗಳನ್ನು ಅದರಲ್ಲಿ ಇರಿಸಿದ.
ಕೊಂದ ಜಾಗದಲ್ಲೇ ಊಟ, ನಿದ್ಧೆ
ತಾನು ಪ್ರೀತಿಸಿದ ಯುವತಿಯನ್ನೇ ಕೊಂದು, ದೇಹವನ್ನು ತುಂಡರಿಸಿ ಇರಿಸಿದ್ದ ಫ್ರಿಡ್ಜ್ ಮುಂದೆಯೇ ಪ್ರತಿನಿತ್ಯ ಅಫ್ತಾಬ್ ಊಟ ಮಾಡಿ, ಅಲ್ಲಿಯೇ ನೆಮ್ಮದಿಯಿಂದ ಮಲಗುತ್ತಿದ್ದ ಎಂಬುದು ವರದಿಯಾಗಿದೆ.
ಕಪ್ಪು ಕವರ್’ನಲ್ಲಿ ದೇಹದ ಪೀಸ್
ಕತ್ತರಿಸಿದ ಪ್ರೇಯಸಿಯ ದೇಹವನ್ನು ಕಪ್ಪು ಕವರ್’ನಲ್ಲಿ ಹಾಕಿದ್ದ ಅಫ್ತಾಬ್ 18 ದಿನಗಳ ಕಾಲ ಪ್ರತಿನಿತ್ಯ ಕಪ್ಪು ಬಣ್ಣದ ಕವರ್’ನಲ್ಲಿ ಹಾಕಿ, ನಗರದ ಹೊರ ಭಾಗದ ಜನರೇ ಓಡಾಡ ಕಾಡು ಪ್ರದೇಶದಲ್ಲಿ ಬಿಸಾಕಿ ಬರುತ್ತಿದ್ದ. ಒಂದೊಂದು ಭಾಗವನ್ನು ಒಂದೊAದು ಪ್ರದೇಶದಲ್ಲಿ ಹಾಕುವ ಮೂಲಕ ಪತ್ತೆಯಾಗದಂತೆ ಜಾಗ್ರತೆ ವಹಿಸಿದ್ದ.
ಆಘಾತಕಾರಿ ವಿಚಾರ ಎಂದರೆ ಹ್ಯೂಮನ್ ಅನಾಟಮಿ ಬಗ್ಗೆ ಓದಿ ತಿಳಿದುಕೊಂಡ ಅಫ್ತಾಬ್ ಯಾವ ಭಾಗ ಬೇಗ ಕೊಳೆಯುತ್ತದೆ ಎಂಬುದನ್ನು ತಿಳಿದುಕೊಂಡು ಅಂತಹುದನ್ನೇ ಮೊದಲ ಆತ ಎಸೆಯುತ್ತಿದ್ದ.
ಮನೆಯಲ್ಲಿ ಯಾವುದೇ ಕಾರಣಕ್ಕೂ ವಾಸನೆ ಬರಬಾರದು ಎಂದು ಪ್ರತಿನಿತ್ಯ ನಿರಂತರವಾಗಿ ಊದಿನ ಕಡ್ಡಿ ಹಚ್ಚುತ್ತಿದ್ದ ಎಂದು ವರದಿಯಾಗಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















