ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಗ್ರಾಮೀಣ ಪ್ರದೇಶದಲ್ಲಿನ ವಿದ್ಯುತ್ ಸಮಸ್ಯೆಗಳ ಪರಿಹಾರಕ್ಕಾಗಿ ಗ್ರಾಮ ವಿದ್ಯುತ್ ಅದಾಲತ್ ನಡೆಸಲು ಸರ್ಕಾರವು ಆದೇಶಿಸಿರುವುದರಿಂದ ನ.19ರ ಶನಿವಾರದಂದು ಬೆಳಗ್ಗೆ 10.30 ಗಂಟೆಗೆ ಗ್ರಾಮಾಂತರ ಉಪವಿಭಾಗದ ಘಟಕ-1, ಭದ್ರಾವತಿ ಮತ್ತು ಘಟಕ-2, ಬಿ.ಆರ್.ಪಿ. ಶಾಖೆಯಲ್ಲಿನ ಕಂಬದಾಳ್ ಹೊಸೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ “ಕಂಬದಾಳ್ ಹೊಸೂರು” ಗ್ರಾಮದಲ್ಲಿ ವಿದ್ಯುತ್ ಅದಾಲತ್ ನಡೆಸಲು ಉದ್ದೇಶಿಸಲಾಗಿದ್ದು, ಗ್ರಾಮ ಪಂಚಾಯ್ತಿ ಪದಾಧಿಕಾರಿಗಳು, ಗ್ರಾಮದ ಸದಸ್ಯರುಗಳು ಮತ್ತು ಗ್ರಾಮಸ್ಥರು ಸದರಿ ವಿದ್ಯುತ್ ಅದಾಲತ್‌ನಲ್ಲಿ ಭಾಗವಹಿಸಿ ವಿದ್ಯುತ್ ಸಮಸ್ಯೆಗಳ ಬಗ್ಗೆ ಅಹವಾಲುಗಳದ್ದಲ್ಲಿ ಪರಿಹರಿಸಿಕೊಳ್ಳಲು ಕೋರಲಾಗಿದೆ.
Also read: ಮಕ್ಕಳ ಆದ್ಯತೆಗೆ ತಕ್ಕಂತೆ ವಿದ್ಯೆಯ ಜೊತೆಗೆ ಕ್ರೀಡೆಗೂ ಪ್ರೋತ್ಸಾಹಿಸಿ: ಜೋಶ್ನಾ ಚಿನ್ನಪ್ಪ ಕರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post