ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ದೇಶಕ್ಕೆ ಸಂಕಷ್ಟ ತಂದೊಡ್ಡಿರುವ ಕೊರೋನಾ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಸೈನಿಕರ ಊಟದ ವ್ಯವಸ್ಥೆಗಾಗಿ ಕೈ ಜೋಡಿಸುವಂತೆ ಅಖಿಲ ಕರ್ನಾಟಕ ಮಾಧ್ವ ಮಹಾ ಸಭಾದ ಬೆಂಗಳೂರು ಪ್ರಧಾನ ಕಾರ್ಯದರ್ಶಿ ಆನಂದ್ ಸವಣೂರು ಮನವಿ ಮಾಡಿದ್ದಾರೆ.
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿದ ಅವರು, ಕೊರೋನಾ ವೈರಸ್ ಲಾಕ್’ಡೌನ್’ನ ಈ ಸಂದರ್ಭದಲ್ಲಿ ದೇಶ ಪಡುತ್ತಿರುವ ಸಂಕಷ್ಟ ನಿವಾರಿಸಲು ವಿಶೇಷ ಸಹಕಾರ ನೀಡುತ್ತಿರುವ ಪೋಲೀಸ್ ಇಲಾಖೆ ಸಿಬ್ಬಂದಿ, ವೈದ್ಯ ಲೋಕದ ಸಿಬ್ಬಂದಿಗೆ, ಪೌರಕಾರ್ಮಿಕರಿಗೆ ಮತ್ತು ಅವಶ್ಯವಿರುವ ಇತರೆ ಸಿಬ್ಬಂದಿಗೆ ದಿನನಿತ್ಯದ ಊಟದ ವ್ಯವಸ್ಥೆ ಮಾಡಲು ಸಹಕಾರ ನೀಡಿ ಎಂದು ಕೋರಿದ್ದಾರೆ.
ದೇವಾಲಯ ಮತ್ತು ಮಠಗಳ ಮುಖ್ಯಸ್ಥರಲ್ಲಿ ವಿನಂತಿ
ಕರ್ನಾಟಕ ರಾಜ್ಯದ ಎಲ್ಲಾ ಮುಜರಾಯಿ ಇಲಾಖೆ ಮತ್ತು ಖಾಸಗಿ ದೇವಸ್ಥಾನ, ರಾಯರ ಮಠ, ಇತರೆ ಎಲ್ಲಾ ಮಠಗಳು, ಸಾಯಿ ಬಾಬಾ ದೇವಸ್ಥಾನ ಗಳ ಮುಖ್ಯಸ್ಥರಲ್ಲಿ ಆನಂದ್ ಅವರು ಮನವಿ ಮಾಡಿದ್ದು, ಸಹಕಾರ ನೀಡುವಂತೆ ಕೋರಿದ್ದಾರೆ.
ಸಾಧ್ಯವಾದಷ್ಟು ಊಟದ ಪ್ಯಾಕೆಟ್’ಗಳನ್ನು ತಯಾರಿಸಿ ನೀಡಿ
ದಾನಿಗಳು ನಿತ್ಯ ತಮ್ಮ ಕೈಯಲ್ಲಿ ಸಾಧ್ಯವಾದಷ್ಟು ಊಟದ ಪ್ಯಾಕೆಟ್’ಗಳನ್ನು ತಯಾರಿಸಿ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಸ್ವಯಂ ಸೇವಾ ಸಂಸ್ಥೆಗಳಿಗೆ ತಿಳಿಸಿದರೆ, ಮುಂದಿನ ಹಂಚುವ ಕೆಲಸ ಮಾಡಲು ಸಾಧ್ಯ ಎಂದು ಮಹಾ ಸಭಾದ ಕೆ.ವಿ. ರಾಮಚಂದ್ರ ಕಳಕಳಿಯ ಪ್ರಾರ್ಥನೆ ಮಾಡಿದ್ದಾರೆ.
ಆಹಾರ ವಿತರಣೆ ಭಗವಂತ ಕೊಟ್ಟ ಕಾರ್ಯ
ಈ ಶತಮಾನದ ಆರಂಭದಲ್ಲಿ ವಿಕಾರೀ ಸಂವತ್ಸರ ಕಳೆದು ಶ್ರೀ ಶಾರ್ವರಿ ಸಂವತ್ಸರ ಪ್ರಾರಂಭವಾಗಿರುವ ಹೊತ್ತಿನಲ್ಲಿ ದೇಶದಲ್ಲಿ ಕೊರೋನಾ ವೈರಸ್ ಲಾಕ್’ಡೌನ್’ನ ಪರಿಣಾಮ ಈ ಸಂದರ್ಭದಲ್ಲಿ ಆಹಾರ ವಿತರಣೆ ಭಗವಂತ ಕೊಟ್ಟ ಕಾರ್ಯ ಎಂದು ತಿಳಿದು ಸಹಕಾರ ಕೊಡಬೇಕೆಂದು ಮಹಾ ಸಭಾದ ಮುರಳೀಧರ ವಿನಂತಿಸಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಕೆ.ವಿ. ರಾಮಚಂದ್ರ(9342921229), ಮುರಳೀಧರ(9341967809), ಆನಂದ್ ಸವಣೂರು(9164778811)ಗೆ ಸಂಪರ್ಕಿಸಬಹುದು.
ಸಾಮಾಜಿಕ ಸೇವಗೆ ಸುವರ್ಣಾವಕಾಶ ಕೊರೋನಾ ವೈರಸ್ ಲಾಕ್’ಡೌನ್’ನ ಸಂಕಷ್ಟ ಎದುರಾಗಿರುವ ಈ ಸಮಯದಲ್ಲಿ ರಾಷ್ಟ್ರ ಮತ್ತು ರಾಜ್ಯದ ಪ್ರಜೆಗಳ ಯೋಗ ಕ್ಷೇಮಕ್ಕಾಗಿ ಸತತ ಹಗಲಿರಳು ಶ್ರಮಿಸುತ್ತಿರುವ ಪೋಲೀಸ್ ಇಲಾಖೆ ಸಿಬ್ಬಂದಿ, ವೈದ್ಯ ಲೋಕದ ಸಿಬ್ಬಂದಿಗೆ, ಪೌರಕಾರ್ಮಿಕರಿಗೆ ನನ್ನ ಹೃದಯ ಪೂರ್ವಕ ನಮನಗಳು.
ಇಲ್ಲಿ ಪ್ರತಿಪಕ್ಷಗಳು ಹಾಗೂ ಸರ್ಕಾರ ದ ಜೊತೆ ಜೊತೆಗೆ ನಾಗರಿಕರು ಸಮ್ಮಿಳಿತವಾಗಿ ಕೆಲಸ ಮಾಡಬಹುದಾದ ಒಂದು ಸಾಮಾಜಿಕ ಸೇವೆಯ ಸುವರ್ಣಾವಕಾಶ ರೂಪುಗೊಂಡಿದೆ.
ದಿನನಿತ್ಯದ ವಸ್ತುಗಳು, ಆಹಾರ ಸಿಗದೆ ಜನ ಕಂಗಾಲಾಗಿದ್ದಾರೆ. ಇಲ್ಲಿರಲೂ ಆಗದೆ, ತಮ್ಮೂರಿಗೆ ಹೋಗಲು ಆಗದೆ ಪರಿತಪಿಸುತ್ತಿದ್ದಾರೆ. ಇದಕ್ಕೊಂದು ಸ್ಪಷ್ಟ ಪರಿಹಾರ ಕಲ್ಪಿಸಬೇಕು. ಅದಕ್ಕಾಗಿ ರಾಜ್ಯದ ನಾಗರಿಕರು ನಾವೆಲ್ಲರೂ ಜೊತೆ ಜೊತೆಗೆ ಹೆಜ್ಜೆ ಹಾಕಿ ತಮ್ಮ ತಮ್ಮ ಕೈಯಲ್ಲಿ ಅದ ಸಹಾಯಹಸ್ತ ಚಾಚಬೇಕು.
Get in Touch With Us info@kalpa.news Whatsapp: 9481252093
Discussion about this post