ಮುಂಬೈ: ಚಾಯ್ ವಾಲಾ ನರೇಂದ್ರ ಮೋದಿ ಪ್ರಧಾನಿಯಾಗಿರುವುದಕ್ಕೆ ಕಾಂಗ್ರೆಸ್ ಪಕ್ಷ ಪರೋಕ್ಷ ಕಾರಣ… ಈ ಮಾತನ್ನು ಹೇಳಿರುವುದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುಕ ಖರ್ಗೆ..
ಹೌದು… ಈ ಕುರಿತಂತೆ ಮಾತನಾಡಿರುವ ಖರ್ಗೆ, 70 ವರ್ಷ ಕಾಂಗ್ರೆಸ್ ದೇಶಕ್ಕೆ ಏನು ಕೊಡುಗೆ ನೀಡಿದೆ ಎಂದು ಮೋದಿ ಪದೇ ಪದೇ ಕೇಳುತ್ತಾರೆ. ನಾವು 70 ವರ್ಷ ಪ್ರಜಾಪ್ರಭುತ್ವವನ್ನು ಕಾಪಾಡಿದ್ದಕ್ಕಾಗಿಯೇ ಇಂದು ಚಾಯ್ ವಾಲಾ ಮೋದಿ ಇಂದು ಪ್ರಧಾನಿಯಾಗಿರುವುದು ಎಂದಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಲಾದ ಯೋಜನೆಗಳ ಪಟ್ಟಿ ನೀಡಿದ ಖರ್ಗೆ ಈ ಎಲ್ಲಾ ಯೋಜನೆಗಳು ವಿಫಲವಾಗಿವೆ ಎಂದು ದೂರಿದ್ದಾರೆ.
ಇಂದಿರಾಗಾಂಧಿ, ರಾಜೀವ್ ಗಾಂಧಿ ಹಾಗೂ ಸೋನಿಯಾಗಾಂಧಿ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸಲಾಗುತ್ತಿದೆ. ಇದನ್ನು ಬಿಜೆಪಿಯೇ ಮಾಡುತ್ತಿದೆ. ಆದರೆ, ಕಾಂಗ್ರೆಸ್ ಒಂದು ಕುಟುಂಬವಾಗಿದ್ದು, ನಾವೆಲ್ಲಾ ಅದರ ಸದಸ್ಯರು ಎಂದಿದ್ದಾರೆ ಖರ್ಗೆ.
43 ವರ್ಷದ ಹಿಂದೆ ದೇಶದಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿಯ ಕುರಿತಾಗಿ ಮೋದಿ ಮಾತನಾಡುತ್ತಾರೆ. ಆದರೆ, ಕಳೆದ ನಾಲ್ಕು ವರ್ಷದಿಂದ ದೇಶದಲ್ಲಿ ಅನಧಿಕೃತವಾಗಿ ಹೇರಲಾಗಿರುವ ತುರ್ತು ಪರಿಸ್ಥಿತಿಯ ಕುರಿತಾಗಿ ಮೋದಿ ಏನು ಹೇಳುತ್ತಾರೆ ಎಂದು ಖರ್ಗೆ ಪ್ರಶ್ನಿಸಿದ್ದಾರೆ.
Discussion about this post