ಕಲ್ಪ ಮೀಡಿಯಾ ಹೌಸ್ | ವಾಷಿಂಗ್ಟನ್(ಅಮೆರಿಕಾ) |
ಯಕಶ್ಚಿತ್ ವಾಷಿಂಗ್ ಮಷೀನ್ ಕೆಟ್ಟು ಹೋದ ವಿಚಾರದಲ್ಲಿ ಆರಂಭವಾಗ ಜಗಳ ಭಾರತದ ಕರ್ನಾಟಕ ಮೂಲದ ವ್ಯಕ್ತಿಯೊಬ್ಬರ ಭೀಕರ ಹತ್ಯೆಯಲ್ಲಿ ಅಂತ್ಯವಾಗಿರುವ ಘೋರ ಘಟನೆ ಅಮೆರಿಕಾದ ವಾಷಿಂಗ್ಟನ್’ನಲ್ಲಿ ನಡೆದಿದೆ.
ಕೆಟ್ಟುಹೋದ ವಾಷಿಂಗ್ ಮಿಷನ್ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು, ಅಮೆರಿಕದಲ್ಲಿ ಪತ್ನಿ, ಮಗನ ಮುಂದೆಯೇ ಕರ್ನಾಟಕ ಮೂಲದ ಮೋಟೆಲ್ ಮ್ಯಾನೇಜನರ್ ಶಿರಚ್ಛೇದ ಮಾಡಲಾಗಿದೆ.
ಮೋಟೆಲ್ ಎಂಬ ಪದ ಮೋಟರ್ ಲಾಡ್ಜ್ ಅನ್ನುವುದನ್ನು ಸೂಚಿಸುತ್ತದೆ. ಅಂದರೆ ಸರಳವಾದ ಬಜೆಟ್ ಸ್ನೇಹಿ ವಾಸ್ತವ್ಯಕ್ಕೆ ಯೋಗ್ಯವಾದ ಹೋಟೆಲ್ ಮಾದರಿಯ ಸ್ಥಳವಾಗಿದೆ.

ಮೋಟೆಲ್ ಮ್ಯಾನೇಜರ್ ಆಗಿರುವ ಕರ್ನಾಟಕ ಮೂಲದ ಚಂದ್ರ ನಾಗಮಲ್ಲಯ್ಯ (50), 37 ವರ್ಷದ ತನ್ನ ಸಹೋದ್ಯೋಗಿ ಕೊಬೋಸ್ ಮಾರ್ಟಿನೆಜ್ ಮತ್ತು ಮತ್ತೊಬ್ಬ ಮಹಿಳಾ ಸಹೋದ್ಯೋಗಿಗೆ ಕೆಟ್ಟುಹೋಗಿರುವ ವಾಷಿಂಗ್ ಮಿಷಿನ್ ಬಳಸದಂತೆ ಹೇಳಿದ್ದಾರೆ.
ಅವರು ನೇರವಾಗಿ ಹೇಳದೇ ಮತ್ತೊಬ್ಬರಿಂದ ಅನುವಾದಿಸುವಂತೆ ಸೂಚನೆ ನೀಡಿದ್ದಾರೆ. ಅಷ್ಟಕ್ಕೇ ಅಸಮಾಧಾನಗೊಂಡ ಕೊಬೋಸ್ ಮಾರ್ಟಿನೆಜ್ ಅಸಮಾಧಾನಗೊಂಡಿದ್ದಾನೆ ಎಂದು ಹೇಳಲಾಗಿದೆ.
ಅಮೆರಿಕಾದಲ್ಲಿ ಕರ್ನಾಟಕ ಮೂಲದ ವ್ಯಕ್ತಿಯೊಬ್ಬರ ಈ ಭೀಕರ ಹತ್ಯೆ ಇಡೀ ಭಾರತ ದೇಶವನ್ನೇ ಬೆಚ್ಚಿ ಬೀಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post