‘ಸೂಜಿದಾರ’ ಸಿನಿಮಾದ ಹೆಸರು ಕೇಳಿದ ಕಿವಿಗಳಿಗೆ ಏನೋ ಒಂದ್ Attention ಸೆಳೆಯುತ್ತೆ. ಹೊಸಬರ ಪ್ರಯೋಗವಾದ್ರೂ ಕಸುಬು ಕರಗತವಾಗಿದೆ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ ನಿರ್ದೇಶಕ ಮೌನೇಶ್ ಬಡಿಗೇರ್.
ಪ್ರೇಕ್ಷಕ ಸಿನಿಮಾ ನೋಡಲು ಕುಳಿತಾಗಿನಿಂದ ಕೊನೆಯವರೆಗೂ ಕುತೂಹಲದಿಂದಲೇ ಹಿಡಿದಿಟ್ಟುಕೊಂಡು ಕಥೆ ಸಾಗುತ್ತದೆ.
ಬಹುತೇಕರ ಬದುಕು ಸದಾ ಸುಭದ್ರತೆಯಿಂದ ಕೂಡಿರುತ್ತದೆ. ಮತ್ತೆ ಪ್ರತಿಯೊಬ್ಬರು ಕೂಡ Secured Zone ಅಲ್ಲಿಯೇ ಇರಬೇಕೆಂದು ಬಯಸುತ್ತಾರೆ. ಜೀವನ ಮನುಷ್ಯ ಬಯಸಿದಂತೆ ಎಲ್ಲರ ಬಾಳಲ್ಲೂ ಇರಲು ಸಾಧ್ಯವಿಲ್ಲ.
ನಾಯಕ ನಟ ಆರಂಭದಲ್ಲಿ ಬಸ್’ನಲ್ಲಿ ಪ್ರಯಾಣಿಸುವಾಗ ಕೊನೆಯ ನಿಲ್ದಾಣಕ್ಕೆ ಟಿಕೇಟ್ ಪಡೆಯುತ್ತಾನೆ. ಯಾರೋ ತನ್ನನ್ನು ಗುರುತಿಸಿ ಬಿಟ್ಟರೆಂದು ಆತಂಕದಿಂದ ಬಸ್ಸಿಳದು ಓಡಾಲು ಆರಂಭಿಸುತ್ತಾನೆ. ಹೇಗೊ ಕೆಲಸ ಗಿಟ್ಟಿಸಿ ಕೆಲಸ ಕೊಟ್ಟವನಿಂದಲೇ ಉಳಿಯುವ ವಸತಿ ವ್ಯವಸ್ಥೆ ಪ್ರಾಪ್ತಿಯಾಯಿತು. ತಾನು ಉಳಿದ ವಠಾರದಲ್ಲಿ ನಟಿ ಹರಿಪ್ರಿಯ ಗೃಹಿಣಿಯಾಗಿ ಸುಚೇಂದ್ರ ಪ್ರಸಾದ್ ಹೆಂಡತಿ ಪಾತ್ರ ಪರಿಚಯವಾಗುತ್ತದೆ.
ನಿರ್ದೇಶಕರು ಮರೆಯುವ ಕಾಯಿಲೆಯಿಂದ ಬಳಲುವುದನ್ನು ಪರಿಣಾತ್ಮಕವಾಗಿ ಮನದಟ್ಟು ಮಾಡದಿದ್ದರೂ ಹರಿಪ್ರಿಯರ ಅಭಿನಯ ನೋಡುಗರನ್ನು ಕಥಾ ಹಂದರದಲ್ಲಿ ಮುಳುಗುವಂತೆ ಮೋಡಿ ಮಾಡುವುದರಲ್ಲಿ ಸೋತಿಲ್ಲ. ಸದಾ ಬಾಚಣಿಗೆಯನ್ನು ಬೀಳಿಸಿಕೊಳ್ಳುವ ಹರಿಪ್ರಿಯಗೆ ತಾನು ಯಾರು? ಪೂರ್ವಾಶ್ರಮದಲ್ಲಿ ಎಲ್ಲಿದ್ದೆ ಇವೇ ಇತ್ಯಾದಿ ಗೊಂದಲಗಳಿಗೆ ಉತ್ತರ ಹುಡುಕುವುದೇ ಉದ್ಯೋಗ.
ನಾಯಕ ನಟನ ಹೆಸರು ಶಂಕರ ಎಂದು ಮೊದಲ ಅರ್ಧ ಭಾಗದಲ್ಲಿದ್ದು ಉಳಿದ ಅರ್ದ ಭಾಗದಲ್ಲಿ ಅಸಲಿ ಹೆಸರು ಶಬ್ಬೀರ್ ಎನ್ನುವುದರಲ್ಲಿ ಕಥೆಯ ಮೂಲ ಅಡಗಿದೆ ಎನ್ನಬಹುದು. ಕಳೆದ ಒಂದೊಂದು ಶತಮಾನದಲ್ಲಿ ಸಾಮಾಜಿಕ-ಆರ್ಥಿಕ ವ್ಯವಸ್ಥೆಯಲ್ಲಿ ಏನೇ ಬದಲಾವಣೆಗಳನ್ನು ಕಂಡಿರಬಹುದು. ಲವ್ ಜಿಹಾದ್, ಭಯೋತ್ಪಾದನೆಯಂತಹ ಕೃತ್ಯಗಳನ್ನು ಖುದ್ದಾಗಿ ಒಂದು ಕೋಮಿನವರ ತಲೆಗೆ ಕಟ್ಟುತ್ತದೆ ಈ ಸಮಾಜ.
ಮನುಷ್ಯನಿಗೆ ಆಹಾರ ಬಟ್ಟೆ ವಸತಿ ಇಲ್ಲದಿರುವಾಗ ಕೋಮುವಾದವೇ ಅರ್ಥವಾಗಲ್ಲ. ಯಾವಾಗ ಮೂಲಭೂತ ಸೌಲಭ್ಯಗಳ ವ್ಯವಸ್ಥೆ ಲಭ್ಯವಾಗುತ್ತದೊ ಆಗ ಕೋಮು ಸಂಘರ್ಷಕ್ಕೆ ಶಂಕುಸ್ಥಾಪನೆ ಶುರುವಾಗುತ್ತದೆ.
ಹೋರಾಟದ ಬದುಕಿನಲ್ಲಿ ಒಬ್ಬ ವ್ಯಕ್ತಿ ತನ್ನದಲ್ಲ ತಪ್ಪಿಗೆ ಬದುಕನ್ನೇ ಬಲಿ ಕೊಡಬೇಕಾಗುತ್ತದೆ. ಕಷ್ಟದಲ್ಲಿ ಸಿಲುಕಿ ನರಳುವಾಗ ಹೊರ ಬರುವ ಪ್ರಯತ್ನದಲ್ಲಿರುವಾಗಲೇ ಇನ್ನಾವುದೋ ಸನ್ನಿವೇಶದಲ್ಲಿ ಅಕಸ್ಮತಾಗಿ ಸಿಲುಕಿ ಸಂಕಟ ಅನುಭವಿಸುವ ದೃಶ್ಯ ಚಿತ್ರದಲ್ಲಿ ಮನೋಜ್ಞವಾಗಿ ಮೂಡಿಬಂದಿದೆ.
ಒಟ್ಟಾರೆಯಾಗಿ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪ್ರಯೋಗ ಸೂಜಿದಾರ ಎಂದರೆ ತಪ್ಪಾಗಲಾರದು. ಕಲಾತ್ಮಕ ಚಿತ್ರರಸಿಕರಿಗೆ ಕೊಟ್ಟ ಹಣಕ್ಕೆ ಮನೋರಂಜನೆ ರೂಪದಲ್ಲಿ ವಸೂಲಾಗುತ್ತದೆ.
ಬರೆಹ: ಯು.ಜೆ. ನಿರಂಜನ ಮೂರ್ತಿ, ಶಿವಮೊಗ್ಗ
Discussion about this post