ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ರಾಜಧಾನಿ ನವದೆಹಲಿಯಲ್ಲಿ #NewDelhi ಇಂದು ಸಂಜೆ ಭೀಕರ ಸ್ಫೋಟ ಸಂಭವಿಸಿ, 10ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರೆ, ಅದಕ್ಕೂ ಕೆಲವು ಗಂಟೆಗಳ ಮುನ್ನ ಫರೀದಾಬಾದ್’ನಲ್ಲಿ ಭಾರೀ ಪ್ರಮಾಣದ ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿದೆ.
ಫರಿದಾಬಾದ್’ನಲ್ಲಿರುವ ವೈದ್ಯ ಮುಜಮ್ಮಿಲ್ ಶಕೀಲ್ ಎಂಬಾತನ ಮನೆಯಿಂದ ಸುಮಾರು 350ಕೆಜಿಯಷ್ಟು ಭಾರೀ ಪ್ರಮಾಣದ ಸ್ಫೋಟಕ #Explosive ವಸ್ತುಗಳನ್ನು ವಶಕ್ಕೆ ಪಡೆಯಾಗಿದೆ.
ವರದಿಗಳ ಪ್ರಕಾರ, ಬಂಧಿತ ವೈದ್ಯ ಶಕೀಲ್, ಫರೀದಾಬಾದ್’ನಲ್ಲಿ ಕಳೆದ ಮೂರು ವರ್ಷಗಳಿಂದ ಅಲ್-ಫಲಾಹ್ ಸ್ಕೂಲ್ ಆಫ್ ಮೆಡಿಕಲ್ ಸೈನ್ಸಸ್ ಆ್ಯಂಡ್ ರಿಸರ್ಚ್ ಸೆಂಟರ್’ನಲ್ಲಿ ಹಿರಿಯ ವೈದ್ಯನಾಗಿ ಕೆಲಸ ಮಾಡುತ್ತಿದ್ದ. ಆತ ಧೋಜ್’ನಲ್ಲಿ ಒಂದು ಕೊಠಡಿಯನ್ನು ಬಾಡಿಗೆಗೆ ಪಡೆದಿದ್ದನು.

ಈತನ ರೂಂ ಮೇಲೆ ದಾಳಿ ನಡೆಸಿದಾಗ 8 ದೊಡ್ಡ ಹಾಗೂ 4 ಸಣ್ಣ ಸೂಟ್ ಕೇಸ್’ಗಳನ್ನು ವಶಕ್ಕೆ ಪಡೆಯಲಾಗಿದ್ದು, ಅವೆಲ್ಲವುಗಳ ತುಂಬ ಸ್ಫೋಟಕ ವಸ್ತುಗಳು ತುಂಬಿದ್ದವು.
ಇನ್ನು ಇದೇ ವೇಳೆ, ಜಮ್ಮು ಕಾಶ್ಮೀರ ಪೊಲೀಸರು ಮತ್ತು ಹರಿಯಾಣ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಎಕೆ -74 ಅಸಾಲ್ಟ್ ರೈಫಲ್, ಮ್ಯಾಗಜೀನ್’ಗಳು, 83 ಸಜೀವ ಗುಂಡುಗಳು, ಒಂದು ಪಿಸ್ತೂಲ್, 8 ಸಜೀವ ಗುಂಡುಗಳು, 2 ಖಾಲಿ ಕಾರ್ಟ್ರಿಡ್ಜ್ ಮತ್ತು 2 ಹೆಚ್ಚುವರಿ ಮ್ಯಾಗಜೀನ್’ಗಳು ಪತ್ತೆಯಾಗಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post