ಕಲ್ಪ ಮೀಡಿಯಾ ಹೌಸ್ | ಸೊರಬ |
ರಾಜ್ಯ ವಿಧಾನಸಭೆ ಚುನಾವಣೆ ಮತದಾನದ ಪ್ರಕ್ರಿಯೆಯ ವೇಳೆ ಮತಗಟ್ಟೆ ಒಳಗಡೆಯಲ್ಲಿ ಯುವಕನೊಬ್ಬ ಫೋಟೋ ಕ್ಲಿಕ್ಕಿಸಿದ್ದು, ಇದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ಸ್ಕ್ರೀನ್ ಶಾಟ್ #ScreenShot ಈಗ ವೈರಲ್ ಆಗಿದೆ.
ಸೊರಬ #Soraba ತಾಲೂಕಿನ ಕುಪ್ಪಗಡ್ಡೆ ಹೋಬಳಿ ಗೆಂಡ್ಲದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮತದಾನದ ವೇಳೆ ಮತಗಟ್ಟೆಯಲ್ಲಿ #PollingBooth ಓರ್ವ ಯುವಕ ಯಾರಿಗೆ ಮತದಾನ ಮಾಡಿದ್ದೇನೆ ಎಂಬುದನ್ನು ತಮ್ಮ ವಾಟ್ಸಪ್ ಸ್ಟೇಟಸ್ ಮೂಲಕ ತಿಳಿಸಿದ್ದಾನೆ.

ನಮ್ಮ ಮತ ನಮ್ಮ ಹಕ್ಕು ಎಂಬ ಘೋಷವಾಕ್ಯಕ್ಕೆ ಚ್ಯುತಿ ಬರುವ ಕಾರ್ಯ ಜಿಲ್ಲೆಯಲ್ಲಿ ನಡೆದಿದೆ.

ಇನ್ನು, ಮತಗಟ್ಟೆಯ ಒಳ ಭಾಗದಲ್ಲಿ ಮೊಬೈಲ್ ನಿಷೇಧವಿದ್ದರೂ ಕೊಂಡೊಯ್ದಿದ್ದು ಹೇಗೆ? ಮೊಬೈಲ್ ತೆಗೆದುಕೊಂಡು ಹೋಗಲು ಸಿಬ್ಬಂದಿ ಬಿಟ್ಟಿದ್ದು ಹೇಗೆ? ಫೋಟೋ ತೆಗೆದುಕೊಳ್ಳಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಉದ್ಬವವಾಗಿದೆ.
ಅಲ್ಲದೇ, ಮತದಾನದ ವೇಳೆ ಈ ಫೋಟೋ ಕ್ಲಿಕ್ಕಿಸಲು ಪರ್ಮಿಷನ್ ಕೊಟ್ಟಿದ್ದು ಯಾರು? ಮತಗಟ್ಟೆ ಒಳಗೆ ಮೊಬೈಲ್ ಕೊಂಡೊಯ್ದು ಫೋಟೋ ತೆಗೆಯುವಾಗ ಅಲ್ಲಿದ್ದ ಅಧಿಕಾರಿ ಹಾಗೂ ಭದ್ರತಾ ಸಿಬ್ಬಂದಿಗಳು ಏನು ಮಾಡುತ್ತಿದ್ದರು? ಇದಕ್ಕೆ ಯಾರು ಹೊಣೆ? ಇದು ಅವರ ಕರ್ತವ್ಯದ ನಿರ್ಲಕ್ಷವಲ್ಲವೇ ಎಂಬ ಪ್ರಶ್ನೆಗಳು ಉದ್ಬವವಾಗಿದ್ದು, ಇವಕ್ಕೆಲ್ಲಾ ಚುನಾವಣಾಧಿಕಾರಿಗಳು ಉತ್ತರ ನೀಡಬೇಕಿದೆ.










Discussion about this post