ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಬಡ್ಗಾಮ್’ನಲ್ಲಿ ವಾಯುಸೇನೆಗೆ ಸೇರಿದ ಮಿಗ್ ವಿಮಾನ ಈಗ್ಗೆ ಕೆಲವು ನಿಮಿಷ ಮುನ್ನ ಪತನಗೊಂಡಿದ್ದು, ಘಟನೆಯನ್ನು ಇಬ್ಬರು ಪೈಲಟ್’ಗಳು ಹುತಾತ್ಮರಾಗಿದ್ದಾರೆ.
ದೈನಿಂದಿನ ಕಾರ್ಯಾಚರಣೆಯಲ್ಲಿದ್ದ ಮಿಗ್ ವಿಮಾನ ತಾಂತ್ರಿಕ ದೋಷದಿಂದ ಪತನಗೊಂಡಿದೆ ಎಂದು ಹೇಳಲಾಗಿದ್ದು, ಇಡಿಯ ವಿಮಾನ ಸಂಪೂರ್ಣ ಹೊತ್ತಿ ಉರಿದುಹೋಗಿದೆ.
ಗುಡ್ಡ ಪ್ರದೇಶದಲ್ಲಿ ವಿಮಾನ ಪತನಗೊಂಡಿದ್ದು, ಸಾವಿರಾರು ಸಂಖ್ಯೆಯಲ್ಲಿ ಸ್ಥಳೀಯರು ನೆರೆದಿದ್ದಾರೆ. ಸೇನೆಯನ್ನು ಸ್ಥಳದಲ್ಲಿ ತುರ್ತಾಗಿ ನಿಯೋಜನೆ ಮಾಡಲಾಗಿದ್ದು, ವಿಮಾನ ಪತನಕ್ಕೆ ನಿಜವಾದ ಕಾರಣವೇನು ಎಂಬುದು ಅಧಿಕೃತ ಮಾಹಿತಿಗಳ ಮೂಲಕವಷ್ಟೆ ತಿಳಿದುಬರಬೇಕಿದೆ.
#SpotVisuals: Police on military aircraft crash in Jammu & Kashmir's Budgam, say, "Two bodies have been found at the crash site." pic.twitter.com/Tg2uFeJjdW
— ANI (@ANI) February 27, 2019
ಇದೇ ವೇಳೆ ವಿಮಾನ ಪತನಗೊಂಡ ಸ್ಥಳ ಲೇಹ್, ಜಮ್ಮು ಬಳಿಯಲ್ಲೆ ಇರುವ ಹಿನ್ನೆಲೆಯಲ್ಲಿ ಲೇಹ್, ಜಮ್ಮು, ಶ್ರೀನಗರ ಹಾಗೂ ಪಟಾಣ್’ಕೋಟ್ ವಿಮಾನ ನಿಲ್ದಾಣ ಸೇರಿದಂತೆ ಎಲ್ಲ ಸ್ಥಳಗಳಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಅಲ್ಲದೇ, ಭದ್ರತೆ ದೃಷ್ಠಿಯಿಂದ ಎಲ್ಲ ಕಮರ್ಷಿಯಲ್ ವಿಮಾನಗಳ ಹಾರಾಟವನ್ನು ಈ ನಿಲ್ದಾಣಗಳಿಂದ ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ.
Discussion about this post