ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕೊಪ್ಪಳ: ರಾಸಾಯನಿಕ ದುರಂತ ನಿವಾರಣಾ ಸಪ್ತಾಹದ ಹಿನ್ನೆಲೆಯಲ್ಲಿ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್’ನಲ್ಲಿ ಆಯೋಜಿಸಲಾಗಿದ್ದ ಅಣಕು ಪ್ರದರ್ಶನ ಸುರಕ್ಷತೆಯ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಸಪ್ತಾಹ ಅಂಗವಾಗಿ ವಿವಿಧ ಕಾರ್ಯಕ್ರಮವನ್ನು ಕಾರ್ಖಾನೆಯ ಆವರಣದಲ್ಲಿ ಒಂದು ವಾರದ ಕಾಲ ಆಯೋಜಿಸಲಾಗಿತ್ತು. ಕಾರ್ಖಾನೆಯ ಅನೇಕ ವಿಭಾಗದಲ್ಲಿ ಸಿಓ ಗ್ಯಾಸ್ ಸುರಕ್ಷತೆ , ಬೆಂಕಿ ಅಪಘಾತ ಮತ್ತು ನಿಯಂತ್ರಣ, ಎಲ್’ಪಿಜಿ ಗ್ಯಾಸ್ ಸುರಕ್ಷತೆ ಮತ್ತು ರಾಸಾಯನಿಕ ವಸ್ತುಗಳ ಸುರಕ್ಷಿತ ಸಂಗ್ರಹಣೆ ಮತ್ತು ಕಾರ್ಯವೈಖರಿ ಬಗ್ಗೆ, ತರಬೇತಿಯನ್ನು ಆಯೋಜಿಸಲಾಗಿತ್ತು.
ಸಪ್ತಾಹದ ಸಂಪನ್ನಕ್ಕೂ ಮುನ್ನಾ ದಿನ ಅಂದರೆ ನಿನ್ನೆ, ಬೀಡು ಕಬ್ಬಿಣ ವಿಭಾಗ ಮತ್ತು ಪವರ್ ಪ್ಲಾಂಟ್ ಜಂಟಿಯಾಗಿ ಸಿಓ ಗ್ಯಾಸ್ ಮತ್ತು ಬೆಂಕಿ ವಿಷಯದಲ್ಲಿ ಅಣಕು ಪ್ರದರ್ಶನವನ್ನು ಗ್ಯಾಸ್ ಫೋಲ್ಡರ್ ಹತ್ತಿರ ಆಯೋಜಿಸಲಾಗಿತ್ತು.
ಈ ಅಣಕು ಪ್ರದರ್ಶನದ ವೀಕ್ಷಕರಾಗಿ ಕರ್ನಾಟಕ ಸರ್ಕಾರದ ಬಳ್ಳಾರಿ ವಿಭಾಗದ ಕಾರ್ಖಾನೆಗಳ ಮತ್ತು ಬಾಯ್ಲರ್’ಗಳ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀ ರವೀಂದ್ರ ರಾಥೋಡ್ ಮತ್ತು ಕೊಪ್ಪಳ ಸಹಾಯಕ ನಿರ್ದೇಶಕರಾದ ಶ್ರೀ ವಿಜಯಕುಮಾರ್ ಹಾಗೂ ಎಂಎಸ್ ಮೆಟಲ್ಸ್ ಹೊಸಹಳ್ಳಿ, ಬರೋಕ ಪವರ್ಸ್ ಶಿವಪುರ, ಎಕ್ಸ್ ಇಂಡಿಯಾ ಲಿಮಿಟೆಡ್ ಹಾಗೂ ಇನ್ನಿತರೆ ಕಾರ್ಖಾನೆಗಳ ಸುರಕ್ಷತಾ ಅಧಿಕಾರಿಗಳು ಮತ್ತು ಅಧಿಕಾರಿಗಳ ನೇತೃತ್ವದಲ್ಲಿ ಕಿರ್ಲೋಸ್ಕರ್ ಕಾರ್ಖಾನೆಯ ಗ್ಯಾಸ್ ಹೋಲ್ಡರ್, ಹತ್ತಿರ ಸಿ.ಓ ಗ್ಯಾಸ್’ಗೆ ಸಂಬಂಧಿಸಿದ ಅಣಕು ಪ್ರದರ್ಶನ ಮಾಡಲಾಯಿತು.
ಈ ಸಂದರ್ಭದಲ್ಲಿ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷರಾದ ಶ್ರೀ ಎನ್.ಬಿ. ಏಕತಾರೆ ಹಾಗೂ ಬೀಡುಕಬ್ಬಿಣ ವಿಭಾಗದ ಮುಖ್ಯಸ್ಥರಾದ ಶ್ರೀ ಎಂ.ಜಿ. ನಾಗರಾಜ್ ಮತ್ತು ಎರಕ ವಿಭಾಗ ಮತ್ತು ಬೀಡುಕಬ್ಬಿಣ ವಿಭಾಗದ ಹಿರಿಯ ಅಧಿಕಾರಿಗಳು ಕಾರ್ಮಿಕರು, ಗುತ್ತಿಗೆ ಕೆಲಸಗಾರರು, ಈ ಅಣಕು ಪ್ರದರ್ಶನದ ವೀಕ್ಷಿಸಿದರು.
ವೀಕ್ಷಕರಾಗಿ ಆಗಮಿಸಿದ್ದ ಶ್ರೀ ಶಿವಪುತ್ರಪ್ಪ ಬರೋಕ ಪವರ್ ಹಾಗೂ ಶ್ರೀ ಮುರಳಿ ಎಕ್ಸ್ ಇಂಡಿಯಾ ಲಿಮಿಟೆಡ್, ಕಿರ್ಲೋಸ್ಕರ್ ಕಾರ್ಖಾನೆಯ ಶ್ರೀ ಚಕ್ರವರ್ತಿಯವರು ಮತ್ತು ಸಹಾಯಕ ನಿರ್ದೇಶಕರಾದ ಶ್ರೀ ವಿಜಯ್ ಕುಮಾರ್ ಮತ್ತು ಶ್ರೀ ರವೀಂದ್ರ ರಾಥೋಡ್, ಜಂಟಿ ನಿರ್ದೇಶಕರು ಅಣುಕು ಪ್ರದರ್ಶನ ಮತ್ತು ಅದರಲ್ಲಿ ಸರಿಪಡಿಸಿಕೊಳ್ಳುವ ಅಂಶಗಳನ್ನು ಗಮನಿಸಿ ತಿಳಿಸಿದರು.
ಕಾರ್ಖಾನೆಯ ಪ್ರೆಸಿಡೆಂಟ್ ಶ್ರೀ ಏಕತಾರೆ ಅವರು ಮಾತನಾಡಿ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಅಣುಕು ಪ್ರದರ್ಶನಗಳನ್ನು ಮಾಡುವುದರ ಮೂಲಕ ಸುರಕ್ಷತೆಯ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಬೇಕು ಹಾಗೂ ಇಂದಿನ ಅಣುಕು ಪ್ರದರ್ಶನ ವೀಕ್ಷಕರಾಗಿ ಬಂದಂತಹ ಅಧಿಕಾರಿಗಳು ತಿಳಿಸಿದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಮುಂದಿನ ದಿನಗಳಲ್ಲಿ ಮಾಡುವ ಅಣುಕು ಪ್ರದರ್ಶನದಲ್ಲಿ ಸರಿಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಾರಂಭದಲ್ಲಿ ರಾಸಾಯನಿಕ ದುರಂತ ನಿವಾರಣಾ ದಿನಾಚರಣೆ ಭೂಪಾಲ್ ನಗರದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮಡಿದ ಸಾವಿರಾರು ಕಾರ್ಮಿಕರು, ಸಾರ್ವಜನಿಕರಿಗೆ ಶಾಂತಿ ಸಿಗಲೆಂದು ಒಂದು ನಿಮಿಷದ ಮೌನಾಚರಣೆ ಮಾಡಲಾಯಿತು. ಕಾರ್ಯಕ್ರಮ ಮುಗಿದ ನಂತರ ಸುರಕ್ಷತಾ ವಾಗ್ದಾನ ತೆಗೆದುಕೊಳ್ಳಲಾಯಿತು.
ಈ ಎಲ್ಲಾ ಕಾರ್ಯಕ್ರಮಗಳನ್ನು ಆಯೋಜಿಸಲು ಸಮಯವನ್ನು ನೀಡಿ ಸುರಕ್ಷತಾ ವಿಭಾಗದ ಜೊತೆ ಸಹಕರಿಸಿದ ಎಲ್ಲಾ ವಿಭಾಗದ ಕಾರ್ಮಿಕರು, ಅಧಿಕಾರಿಗಳು, ಮತ್ತು ಮುಖ್ಯಸ್ಥರಿಗೆ ಸುರಕ್ಷತಾ ವಿಭಾಗದ ಅಧಿಕಾರಿಗಳಾದ ಶ್ರೀ ರವಿಕುಮಾರ್ ಹಾಗೂ ಮುರಳೀಧರ್ ನಾಡಿಗೇರ್ ಧನ್ಯವಾದಗಳನ್ನು ತಿಳಿಸಿದರು.
ವರದಿ: ಮುರುಳೀಧರ್ ನಾಡಿಗೇರ್, ಕೊಪ್ಪಳ
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
Get in Touch With Us info@kalpa.news Whatsapp: 9481252093
Discussion about this post