ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ: ಮೈತ್ರೇಯಿ ಆದಿತ್ಯಪ್ರಸಾದ್ |
ಯಕ್ಷಗಾನವು ನಮ್ಮ ಸಂಸ್ಕೃತಿಯ ಪ್ರತೀಕ. ಅದು ತನ್ನ ವಿಶಿಷ್ಟ ಶೈಲಿಯಿಂದಲೇ ಜನರ ಮನರಂಜಿಸಿದೆ. ಎಲ್ಲ ಪ್ರಕಾರಗಳಿಗೂ ಇರುವಂತೆ ಇದಕ್ಕೊಂದು ಸಾಂಪ್ರದಾಯಿಕ ಚೌಕಟ್ಟಿದೆ. ಕಲೆಗೆ ಸಹೃದಯನ ಮನಸ್ಸು ಗೆಲ್ಲುವ ತಾಕತ್ತಿದೆ ರಸಾಸ್ವಾದಕ್ಕೆ ಅದು ಸ್ಪಂದಿಸುತ್ತದೆ. ಹೊಸತನಕ್ಕೆ ತೆರೆದುಕೊಳ್ಳುವ ಭರದಲ್ಲಿ ಒಮ್ಮೊಮ್ಮೆ ಮೂಲ ಸಾಂಪ್ರದಾಯಿಕತೆಯನ್ನು ಬಿಟ್ಟು ಹೋಗುವ ಅಪಾಯಕ್ಕೆ ಸಿಲುಕಿರುವ ಕಲೆಗಳಲ್ಲಿ ಯಕ್ಷಗಾನವೂ ಒಂದು. ಆದರೆ ಇಡಗುಂಜಿಯ ಶ್ರೀಮಹಾಗಣಪತಿ ಯಕ್ಷಗಾನ #Yakshagana ಮಂಡಳಿ ತನ್ನೆಲ್ಲ ಸಾಂಪ್ರದಾಯಿಕತೆಯನ್ನು ಉಳಿಸಿಕೊಳ್ಳುತ್ತಲೇ ಹೊಸ ಹೊಳಹುಗಳಿಗೆ ತೆರೆದುಕೊಳ್ಳುತ್ತಾ ಅದು UNESCO ದ ಮಾನ್ಯತೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.
Also Read>> ರಾಜ್ಯದ 5 ಮಹಾನಗರ ಪಾಲಿಕೆಗಳಿಗೆ ಚುನಾವಣೆ | ಈಗಿರುವ ಮೀಸಲಾತಿಯೇ ಮುಂದುವರೆಯಲಿದೆಯೇ?
ಭಾರತದಲ್ಲಿ ಅನೇಕ ಕಲಾ ಪ್ರಕಾರಗಳಿದ್ದರೂ ಸಹ ಸಧ್ಯಕ್ಕೆ ಮಾನ್ಯತೆ ದೊರೆತಿರುವುದು ಕೇವಲ 8 ಕಲಾ ಪ್ರಕಾರಗಳಿಗೆ ಮಾತ್ರ. ಅದರಲ್ಲಿ ನಮ್ಮ ಕರ್ನಾಟಕದ ಗಂಡುಮಟ್ಟಿದ ಕಲೆ ಎಂದೇ ಖ್ಯಾತಿಯಾಗಿರುವ ( ಇದೀಗ ಸ್ತ್ರೀಯರು ಪಾಲ್ಗೊಳ್ಳುತ್ತಿರುವ ) ಯಕ್ಷಗಾನವು ಒಂದೆಂಬ ಹೆಮ್ಮೆ ನಮ್ಮನ್ನು ಮತ್ತಷ್ಟು ಮೇಲ್ಮಟ್ಟಕ್ಕೆ ಕೊಂಡೊಯ್ಯುತ್ತದೆ. ಕರಾವಳಿ #Coastal ಹಾಗೂ ಉತ್ತರ ಕರ್ನಾಟಕದ ಭಾಗಗಳಲ್ಲಿ ಪ್ರಸಿದ್ಧವಾದ ಈ ಕಲೆ ಪ್ರಸ್ತುತ ಎಲ್ಲೆಡೆ ಹರಡುತ್ತಿದೆ.




ಎಲ್ಲರೂ ಅದ್ಭುತವಾಗಿ ನಟಿಸಿದವರೇ. ಅಲ್ಲಿ ಬಳಸುವ ಸ್ವಚ್ಛ ಕನ್ನಡದ ಭಾಷೆ ನೋಡಿದರೆ ಕಲಾ ಮಾಧ್ಯಮಗಳಲ್ಲಿ ಯಕ್ಷಗಾನದಲ್ಲಿ ಮಾತ್ರ ಸ್ವಚ್ಛ ಕನ್ನಡ ಭಾಷೆ ಜೀವಂತವಾಗಿರುವುದು. ಹಾಗಾಗಿ ಒಟ್ಟಾರೆ ಹೇಳುವುದಾದರೆ ಬಹಳ ದಿನಗಳ ನಂತರ ಶಾಸ್ತ್ರೀಯ ಸಾಂಪ್ರದಾಯಿಕ ಶೈಲಿಯ ಯಕ್ಷಗಾನ ನೋಡಲು ಅವಕಾಶ ಮಾಡಿಕೊಟ್ಟ ಸಹೃದಯರೆಲ್ಲರಿಗೂ ಅನಂತಾನಂತ ಧನ್ಯವಾದಗಳು. ಪ್ರಸಂಗ ಒಂದು ಚೆನ್ನಾಗಿ ಜನ ವೀಕ್ಷಿಸುವಂತಾಗಲು ಸಿನಿಮಾ ಹಾಡು ಬೇಕು ಗಿಮಿಕ್ಸ್ ಬೇಕು ಪ್ರೇಕ್ಷಕರು ಕೇಳ್ತಾರೆ ಅದನ್ನು ಅಂತೆಲ್ಲ ಅಭಿಮಾನದಿಂದ ಹೇಳುವವರು ಇಡಗುಂಜಿ ಮೇಳದ ಆಟವನ್ನು ಒಮ್ಮೆ ನೋಡಬೇಕು. ಜನ ಮೆಚ್ಚಿ ಕುತೂಹಲದಿಂದ ವೀಕ್ಷಿಸುವಂತೆ ಮಾಡಿದ 90ರ ಸಂಭ್ರಮದಲ್ಲಿರುವ ಮೇಳಕ್ಕೂ ಅಭಿನಂದನೆಗಳು.







Discussion about this post