ಬೆಂಗಳೂರು: ರಾಜ್ಯದ ನೋಟು ಮತ್ತು ನಾಣ್ಯ ಸಂಗ್ರಾಹಕರ ಪ್ರಧಾನ ಸಂಘವಾದ ಕರ್ನಾಟಕ ನಾಣ್ಯ ಸಂಘದ ಆಶ್ರಯದಲ್ಲಿ ಜುಲೈ 26 ರಿಂದ 28 ರ ವರೆಗೆ ನಗರದ ಕೆಂಪೇಗೌಡ ರಸ್ತೆಯಲ್ಲಿರುವ ಶಿಕ್ಷಕರ ಸದನದಲ್ಲಿ ವಿಶಿಷ್ಟ ರಾಜ್ಯಮಟ್ಟದ ನಾಣ್ಯ ಮತ್ತು ಕರೆನ್ಸಿ ನೋಟುಗಳ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ.
ಈ ನಾಣ್ಯದರ್ಶಿನಿಯಲ್ಲಿ ಪ್ರಾಚೀನ ಭಾರತದ ನಾಣ್ಯಗಳು, ವಿದೇಶಗಳ ಅಪರೂಪದ, ಐತಿಹಾಸಿಕ ಮಹತ್ವ ಹೊಂದಿರುವ ನಾಣ್ಯಗಳು ಮತ್ತು ನೋಟುಗಳನ್ನು ಪ್ರದರ್ಶಿಸಲಾಗುತ್ತಿದೆ. ಇದಕ್ಕಾಗಿ ದೇಶದ ಅನೇಕ ರಾಜ್ಯಗಳಿಂದ ನಾಣ್ಯ ಸಂಗ್ರಾಹಕರು ಮತ್ತು ಮಾರಾಟಗಾರರು ಆಗಮಿಸಲಿದ್ದಾರೆ.
ಆಸಕ್ತರು ತಮಗೆ ಅಗತ್ಯವಾದ ನಾಣ್ಯ ಮತ್ತು ಕರೆನ್ಸಿ ನೋಟುಗಳನ್ನು ಖರೀದಿಸಲು ಇದೊಂದು ಸುವರ್ಣಾವಕಾಶ ಎಂದು ಕರ್ನಾಟಕ ನ್ಯೂಮಿಸ್ಮಾಟಿಕ್ ಸೊಸೈಟಿಯ ಅಧ್ಯಕ್ಷ ಕೀರ್ತಿ ಎನ್. ಪರೇಖ್ ಮತ್ತು ಪ್ರಧಾನ ಕಾರ್ಯದರ್ಶಿ ಸುರೇಶ್ ತಿಳಿಸಿದ್ದಾರೆ.
Discussion about this post