No Result
View All Result
Mysuru Project Assistant Job Kits Leap 22 K Salary
English Articles

Mysuru Job Alert : Project Assistant Vacancy, 22,000 Salary, Apply by Oct 10

by kalpa News
September 21, 2026
0

Kalpa Media House  |  Mysuru  | Applications have been invited for one Project Assistant post for the Optical Sensing Biotechnology...

Read moreDetails
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
Teen Gang Rape Killed By 3 Minors Body Eaten By Dogs

Teen Gangraped, Killed by Minors in Delhi Body Eaten by Dogs

September 18, 2026
  • Advertise With Us
  • Grievances
  • About Us
  • Contact Us
Wednesday, September 23, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಅನ್ಯ ಪಕ್ಷಗಳಿಂದ ಬರುವ ಶಾಸಕರು, ಸಂಸದರು ದೇಶ ಉಳಿಸಲು ಬಿಜೆಪಿಗೆ ಬರಬಾರದೇ?

kalpa News by kalpa News
July 17, 2019
in Army
0
ಅನ್ಯ ಪಕ್ಷಗಳಿಂದ ಬರುವ ಶಾಸಕರು, ಸಂಸದರು ದೇಶ ಉಳಿಸಲು ಬಿಜೆಪಿಗೆ ಬರಬಾರದೇ?
Share on FacebookShare on TwitterShare on WhatsApp

ನಿತ್ಯ ಮಾಧ್ಯಮಗಳ ಮೂಲಕ, ಸಾಮಾಜಿಕ ಜಾಲತಾಣಗಳ ಮೂಲಕ ನಾವು ಆಗಾಗಿನ ವಿದ್ಯಮಾನಗಳನ್ನು ನೋಡುತ್ತಿರುತ್ತೇವೆ. ಆಡಳಿತಾರೂಢ ಪಕ್ಷಕ್ಕೆ ಬೆಂಬಲವಾಗಿ ಅನ್ಯ ಪಕ್ಷದವರು ಪಕ್ಷಾಂತರ ಮಾಡುತ್ತಿರುವ ಹಲವಾರು ಘಟನೆಗಳಿವೆ. ಇದನ್ನು ಖಂಡಿಸುವವರು, ವಿರೋಧಿಸುವವರನ್ನೂ ನೋಡುತ್ತೇವೆ. ಮಾತ್ರವಲ್ಲ, ಇದನ್ನು ಪಕ್ಷದಲ್ಲಿದ್ದ ಮೊದಲಿನವರು ಸಹಿಸದೆ ನಿಷ್ಕ್ರಿಯರಾಗುವುದು ಅಥವಾ ಪಕ್ಷ ಬಿಟ್ಟು ಹೋಗುವಂತದ್ದೂ ಇದೆ. ಅಂತೂ ಯಾವುದು ಸರಿ, ಯಾವುದು ತಪ್ಪು ಎಂಬ ನಿರ್ಣಯಕ್ಕೆ ಬರಲಾರದೆ ಒದ್ದಾಟ, ಗೊಂದಲ ನಡೆಯುತ್ತಿರುತ್ತದೆ. ಅದೇನೇ ಇರಲಿ ನಮಗೆ ತತ್ವಾಧಾರಿತವೇ ಮುಖ್ಯವಾಗುತ್ತದೆ.

ಯಾವ ತತ್ವ?
ಈಗ ಕೇಂದ್ರದಲ್ಲಿ ಬಿಜೆಪಿ ಸರಕಾರ ಇದೆ. ನಾವು ನೋಡುತ್ತಿದ್ದಂತೆ ಕಮ್ಯುನಿಸ್ಟ್‌, ಕಾಂಗ್ರೆಸ್ ಇತ್ಯಾದಿ ಮುಖಂಡರುಗಳು ಪಕ್ಷಾಂತರ ಮಾಡಿ ಬಿಜೆಪಿ ಸೇರುತ್ತಿದ್ದಾರೆ. ಬಿಜೆಪಿ ಪಕ್ಷ ಪ್ರೇಮಿಗಳು ಇದನ್ನು ಖಂಡಿಸಿದ್ದೂ ಇದೆ, ಸ್ವಾಗತಿಸಿದ್ದೂ ಇದೆ. ಖಂಡಿಸುವುದು ಯಾಕೆಂದರೆ ಈ ಪಕ್ಷಾಂತರಿಗಳು ಹಿಂದೆ ಬಿಜೆಪಿಯನ್ನು, ಮೋದಿಯವರನ್ನು ಹಿಗ್ಗಾಮುಗ್ಗಾ ಠೀಕಿಸಿದ್ದೂ ಇದೆ. ಪಕ್ಷದ ಬೆಂಬಲಿಗರು ಕೂಡಾ ಇಂತವರಿಗೆ ಉಗಿದದ್ದೂ ಇದೆ. ಹಾಗಾಗಿ ಇಂತಹ ವಿದ್ಯಾಮಾನಗಳನ್ನು ಖಂಡಿಸುತ್ತಾರೆ. ಆದರೆ ಇಲ್ಲೊಂದು ವಾಸ್ತವ ಸತ್ಯ ಇದೆ.

ಏನದು ವಾಸ್ತವ ಸತ್ಯ?
ಬಹಳ ಪುರಾತನದಲ್ಲಿಯೂ ಇಂತಹ ಪಕ್ಷಾಂತರ ಘಟನೆಗಳು ಸಿಗುತ್ತದೆ. ಚಕ್ರವರ್ತಿಯು ಈ ಪಕ್ಷಾಂತರಿಗಳನ್ನು ಒಳಗೆ ಕರೆಸಿದ್ದೂ ಇದೆ. ಯಾಕೆ? ಒಬ್ಬ ರಾಜನಿಗೆ ಮಹತ್ತರವಾದ ಜವಾಬ್ದಾರಿ ಎಂದರೆ ಪ್ರಜೆಗಳ ರಕ್ಷಣೆ, ದೇಶಾಭಿವೃದ್ಧಿ. ಶತ್ರು ಪಾಳಯವನ್ನು ಸಂಪೂರ್ಣ ನಾಶ ಮಾಡಲು ಅಸಾಧ್ಯ. ಅಳಿದುಳಿದ ಶತ್ರು ಪಾಳಯಗಳ ಮುಖಂಡರು, ಆಡಳಿತಗಾರರ(ಚಕ್ರವರ್ತಿ) ಮೇಲೆ ದ್ವೇಷ ಸಾಧಿಸಿದರೆ? ಶತ್ರುತ್ವ ಬರುವುದು ತತ್ವ ಸಿದ್ಧಾಂತಗಳ ಭಿನ್ನ ಮತಗಳಿಂದಾಗಿ. ಅಂತಹ ಭಿನ್ನಮತೀಯ ಶತ್ರುಗಳನ್ನು ಪೂರ್ಣ ನಾಶಮಾಡಲು ಅಸಾಧ್ಯ. ಆಗ ಚಕ್ರವರ್ತಿಯು ಅವರಿಗೆ ತಮ್ಮ ಜತೆ ಸೇರಲು ಅವಕಾಶ ಮಾಡಿಕೊಡಲೇ ಬೇಕಾಗುತ್ತದೆ. ಆಗ ಆಡಳಿತವು ಉತ್ತಮಗೊಳ್ಳುತ್ತದೆ. ಅಲ್ಲದೆ ಶತ್ರುವು ಚಕ್ರವರ್ತಿಯ ಸ್ವಾಧೀನಕ್ಕೆ ಬಂದಂತಾಗುತ್ತದೆ.

ಈಗ ಮೋದಿಯವರು ಯಾವುದೋ ಹಳ್ಳಿಯಲ್ಲಿ ಶತೃಕೃತ ವಿಧ್ವಂಸಕ ಕೃತ್ಯಗಳನ್ನು ತಡೆಯಲು ಸಾಧ್ಯವೇ? ಇನ್ನೊಂದೆಡೆ ಪಕ್ಷದ ಅಪಪ್ರಚಾರವನ್ನು ನಿಲ್ಲಿಸುವುದಕ್ಕೂ ಕಷ್ಟವೇ. ಅಪಪ್ರಚಾರಗಳು ಬಲಿಷ್ಟವಾದರೆ ಪ್ರಧಾನಮಂತ್ರಿ ಮತ್ತು ಆ ಪಕ್ಷದ ವರ್ಚಸ್ಸು ಹಾಳಾಗುವುದಕ್ಕೂ ಕಾರಣವಾಗುತ್ತದೆ. ಹಾಗಾಗಿ ಪಕ್ಷಾಂತರ ಮಾಡಿ ಬರುವವರನ್ನು ಪಕ್ಷ ಸಿದ್ಧಾಂತದ ಅಡಿಯಲ್ಲಿ ಸ್ವಾಗತಿಸಲೇಬೇಕು. ಹೀಗೆ ಮಾಡಿದರೆ ದೇಶದ ಪರಂಪರೆ, ಅಖಂಡತೆಗೆ ಧಕ್ಕೆಯಾಗದು. ಒಂದೆಡೆ ಮತಾಂಧ ಉಗ್ರರನ್ನು ಧಮನಿಸಲು, ಅದೇ ಜನಾಂಗದ ಸಾತ್ವಿಕರನ್ನು ಸ್ವಾಗತಿಸುವ ಮೂಲಕ ಮತಾಂಧ ಉಗ್ರರ ಬಲವನ್ನು ತಡೆಯಬಹುದು.

ರಾಮಾಯಣದಲ್ಲಿ ಸಜ್ಜನನಾದ ವಿಭೀಷಣನು ರಾಮನ ಪರಮಶತ್ರು ರಾವಣನ ಸಹೋದರ. ರಾವಣನ ವಧೆಯ ನಂತರ ವಿಭೀಷಣನಿಗೆ ಲಂಕೆಯಲ್ಲಿ ಪಟ್ಟಾಭಿಷೇಕ ಮಾಡಿದ ಮೇಲೆ ಲಂಕೆಯಿಂದ ಭಾರತಕ್ಕೆ ಒದಗುವ ಆತಂಕ ದೂರವಾಯ್ತು. ಒಂದು ವೇಳೆ ವಿಭೀಷಣನನ್ನು ದೂರ ಇಡುತ್ತಿದ್ದರೆ ಅವನೂ ಕೆಟ್ಟವನಾಗಿ ಆತಂಕ ಬರುವಂತಹ ಸನ್ನಿವೇಶಗಳಿತ್ತು. ಮಹಾಭಾರತದಲ್ಲಿ ಪಾಂಡವರ ಪರಮ ಶತ್ರು ದುರ್ಯೋಧನನ ಪರಮಾಪ್ತ ಕರ್ಣನ ಮಗ ವೃಷಕೇತುವನ್ನು ಧರ್ಮರಾಯ ಯುದ್ಧಾನಂತರ ರಾಜ್ಯ ನೀಡಿ ತನ್ನವನನ್ನಾಗಿಸಿಕೊಂಡ. ಚಂದ್ರಗುಪ್ತನ ಪರಮ ಶತ್ರು ನಂದರ ಸದೆಬಡಿದ ನಂತರ, ನಂದರ ಪರಮ ಭಕ್ತನೂ, ನಿಷ್ಟನೂ ಆದಂತಹ ಅಮಾತ್ಯರಾಕ್ಷಸನು ಚಂದ್ರಗುಪ್ತನನ್ನು ಮುಗಿಸಲು ತನ್ನ ದ್ವೇಷದ ಕಿಡಿ ಹಾರಿಸುತ್ತಿದ್ದ. ಇದನ್ನರಿತ ಚಾಣಕ್ಯನು ಕೊನೆಗೆ ಅಮಾತ್ಯನನ್ನೇ ಪ್ರಧಾನ ಮಂತ್ರಿ ಮಾಡಿ ನಿರಾಳನಾದ.

ಇದೇ ಪ್ರಕ್ರಿಯೆಗಳು ಈಗಲೂ ನಡೆಯುತ್ತಿದೆ, ಮುಂದೆಯೂ ನಡೆಯಬಹುದು. ಹಾಗಾಗಿ, ಅನ್ಯಪಕ್ಷಗಳಿಂದ ಬರುವವರನ್ನು ಸ್ವಾಗತಿಸಲೇಬೇಕು. ಆದರೆ ನಮ್ಮ ದೇಶ ರಕ್ಷಣೆಯ, ಪರಂಪರೆಯ ಉಳಿವಿನ ತತ್ವ ಸಿದ್ಧಾಂತಕ್ಕೆ ವಿರೋಧ ಆಗದಂತೆ ಆಡಳಿತಾರೂಢ ಪಕ್ಷವು ನಿಯಂತ್ರಿಸಬೇಕು. ಒಟ್ಟಿನಲ್ಲಿ ದೇಶದ ಪ್ರಜೆಗಳ ಹಿತಾಸಕ್ತಿಯೇ ಮಖ್ಯ ಎಂಬ ತತ್ವವೇ ನಮಗೆ ಮುಖ್ಯ.

ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ

Tags: BJPcongressJDSKannada ArticleKarnataka politicsPM Narendra ModiPrakash Ammannayaಚಾಣಕ್ಯಜ್ಯೋರ್ತಿವಿಜ್ಞಾನಂಪ್ರಕಾಶ್ ಅಮ್ಮಣ್ಣಾಯಬಿಜೆಪಿರಾಮಾಯಣವಿಧ್ವಂಸಕ ಕೃತ್ಯ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಜೂನ್ 26ರಿಂದ ಬೆಂಗಳೂರಿನಲ್ಲಿ ಮೂರು ದಿನ ನೋಟು, ನಾಣ್ಯಗಳ ಪ್ರದರ್ಶನ

Next Post

ವಿಐಎಸ್’ಎಲ್ ಉಳಿಸಲು ರಾಘವೇಂದ್ರ ರಾಜೀನಾಮೆ ನೀಡಿ ಕೇಂದ್ರವನ್ನು ಒತ್ತಾಯಿಸಲಿ

kalpa News

kalpa News

Next Post
ವಿಐಎಸ್’ಎಲ್ ಉಳಿಸಲು ರಾಘವೇಂದ್ರ ರಾಜೀನಾಮೆ ನೀಡಿ ಕೇಂದ್ರವನ್ನು ಒತ್ತಾಯಿಸಲಿ

ವಿಐಎಸ್’ಎಲ್ ಉಳಿಸಲು ರಾಘವೇಂದ್ರ ರಾಜೀನಾಮೆ ನೀಡಿ ಕೇಂದ್ರವನ್ನು ಒತ್ತಾಯಿಸಲಿ

Leave a Reply Cancel reply

Your email address will not be published. Required fields are marked *

No Result
View All Result
Mysuru Project Assistant Job Kits Leap 22 K Salary
English Articles

Mysuru Job Alert : Project Assistant Vacancy, 22,000 Salary, Apply by Oct 10

by kalpa News
September 21, 2026
0

Kalpa Media House  |  Mysuru  | Applications have been invited for one Project Assistant post for the Optical Sensing Biotechnology...

Read moreDetails
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
Teen Gang Rape Killed By 3 Minors Body Eaten By Dogs

Teen Gangraped, Killed by Minors in Delhi Body Eaten by Dogs

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL