ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ತಡಿಕೆಲ ಸುಬ್ಬಯ್ಯ ಪ್ರತಿಷ್ಠಾನದ ಸುಬ್ಬಯ್ಯ ಲಿಟ್ರರಿ ಕ್ಲಬ್ ಹಾಗೂ ಕ್ಷೇಮ ಟ್ರಸ್ಟ್ ಸಹಯೋಗದಲ್ಲಿ ಕ್ಷೇಮಕ್ಕಾಗಿ ಕಲೆ-ಸಾಹಿತ್ಯ ಎಂಬ ವಿಚಾರ ಸಂಕಿರಣವನ್ನು ಫೇಸ್‌ಬುಕ್ ಲೈವ್ ಮೂಲಕ ಜೂನ್ 23ರಂದು ಹಮ್ಮಿಕೊಳ್ಳಲಾಗಿದೆ.
ಅಂದು ಸಂಜೆ 5 ಗಂಟೆಗೆ ಫೇಸ್ ಬುಕ್ ಲೈವ್ ಮೂಲಕ ಸರಣಿ ಕಾರ್ಯಕ್ರಮದ ಆರಂಭವಾಗಲಿದ್ದು, ಮೂರು ದಿನಗಳ ಕಾಲ ನಡೆಯಲಿದೆ.
ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ನಿರ್ದೇಶಕ ಡಾ.ಎಸ್. ನಾಗೇಂದ್ರ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕ್ಷೇಮ ಟ್ರಸ್ಟ್ ಅಧ್ಯಕ್ಷರಾದ ಡಾ.ಕೆ.ಎಸ್. ಶ್ರೀಧರ್ ಉದ್ಘಾಟನಾ ಭಾಷಣ ಮಾಡಲಿದ್ದಾರೆ.
ಮೂರು ದಿನಗಳ ವಿಚಾರ ಸಂಕಿರಣದಲ್ಲಿ ವಿದ್ವಾನ್ ಎಚ್.ಎಸ್. ನಾಗರಾಜ್, ಡಾ.ಕೆ.ಎಸ್. ಪವಿತ್ರ, ಮಾನಸ ಶಿವರಾಮಕೃಷ್ಣ, ಯೋಗಾಚಾರ್ಯ ಬಿ.ಎನ್. ಸುರೇಶ್ ಕುಮಾರ್ ಹಾಗೂ ಎಸ್.ವಿ. ಚಂದ್ರಕಲಾ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಆಸಕ್ತ ಸಾರ್ವಜನಿಕ https://www.facebook.com/kshematrustshimoga.registered ಈ ಲಿಂಕ್ ಕ್ಲಿಕ್ ಮಾಡಿ ನೊಂದಾವಣಿ ಮಾಡಿಕೊಂಡು ಮೂರು ದಿನವು ಕಾರ್ಯಕ್ರಮವನ್ನು ವೀಕ್ಷಿಸಬಹುದಾಗಿದೆ ಎಂದು ಸಂಸ್ಥೆ ಕೋರಿದೆ.
Get In Touch With Us info@kalpa.news Whatsapp: 9481252093







Discussion about this post