ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹಾರನಹಳ್ಳಿ: ಮಾರಕ ಕೊರೋನಾ ವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಬಹಳಷ್ಟು ವರ್ಗದ ಮಂದಿಗೆ ಸಂಘ ಸಂಸ್ಥೆಗಳು ನಿರಂತರವಾಗಿ ಸಹಾಯ ಮಾಡುತ್ತಿವೆ. ಇದರಲ್ಲಿ ಪ್ರಚಾರ ಪಡೆಯುವವರೇ ಹೆಚ್ಚು. ಆದರೆ, ಹಾರನಹಳ್ಳಿಯ ಈ ಯುವಕ ಯಾವುದೇ ಪ್ರಚಾರ ಪಡೆಯದೇ ಸಮಾಜ ಸೇವೆ ಮಾಡುತ್ತಿದ್ದು, ಯುವಕರಿಗೆ ಮಾದರಿಯಾಗಿದ್ದಾರೆ.
ಗ್ರಾಮದ ಯುವಕ ಪ್ರಮೋದ್ ಸಿ.ಪಿ. ಅವರು ಗ್ರಾಮದ ಗೃಹರಕ್ಷಕ ದಳದ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರಿಗೆ ವೈಯಕ್ತಿಕವಾಗಿ ಆಹಾರ ಸಾಮಗ್ರಿಗಳನ್ನು ವಿತರಿಸಿದ್ದಾರೆ.
ಎಲ್ಲೆಡೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ವೇಳೆ ಕೊಡುವ ದಾನಕ್ಕೆ ಪ್ರಚಾರ ಪಡೆಯುವವರೇ ಹೆಚ್ಚು. ಆದರೆ, ತಮ್ಮ ವೈಯಕ್ತಿಕ ಹಣದಿಂದ ಸುಮಾರು 60 ಕಿಟ್’ಗಳನ್ನು ಪ್ರಮೋದ್ ವಿತರಣೆ ಮಾಡಿದ್ದಾರೆ. ಆದರೆ, ಯಾವುದೇ ಪ್ರಚಾರ ಪಡೆದುಕೊಂಡಿಲ್ಲ.
ಈ ಕುರಿತಂತೆ ಪ್ರಮೋದ್ ಅವರನ್ನು ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಮಾತನಾಡಿಸಿದಾಗ, ದೇಶವಾಸಿಯಾಗಿ ನಾನು ನನ್ನ ಕರ್ತವ್ಯ ಮಾಡಿದ್ದೇನೆ. ಪ್ರಚಾರ ಪಡೆದುಕೊಳ್ಳುವಷ್ಟು ದೊಡ್ಡ ಕಾರ್ಯ ನಾನೇನು ಮಾಡಿಲ್ಲ ಎಂದು ಉದಾರತೆ ಮೆರೆಯುತ್ತಾರೆ.
ಆದರೆ, ಪ್ರಮೋದ್ ಅವರ ಈ ಕಾರ್ಯ ಯುವ ಸಮೂಹಕ್ಕೆ ಮಾದರಿಯಾಗಬೇಕು ಎಂಬ ಕಾರಣಕ್ಕಾಗಿ ಅವರ ಈ ಸೇವಾ ಕಾರ್ಯದ ಬಗ್ಗೆ ಪ್ರಕಟಿಸುತ್ತಿದ್ದೇವೆ.
ಸದಾ ಸಮಾಜಸೇವೆಯಲ್ಲಿ ತೊಡಗಿಕೊಳ್ಳುವ ಪ್ರಮೋದ್ ಅವರ ಈ ಕಾರ್ಯಕ್ಕೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಅಭಿನಂದಿಸುತ್ತದೆ.
Get in Touch With Us info@kalpa.news Whatsapp: 9481252093
Discussion about this post