ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಲಾಕ್ ಡೌನ್ ಇದೆ ಹೊರಕ್ಕೆ ಬರಬೇಡಿ, ಮಾಸ್ಕ್ ಧರಿಸು ಎಂಬ ಕಾರಣಕ್ಕಾಗಿ ಪೌರಕಾರ್ಮಿಕನನ್ನು ಇರಿದು ಕೊಂದಿರುವ ಘಟನೆ ನಗರದಲ್ಲಿ ನಿನ್ನೆ ಸಂಜೆ ನಡೆದಿದೆ.
ಅನ್ವರ್ ಕಾಲೋನಿಯ ಯುವಕ ಸಾಬೀಬ್ ಎಂಬಾತ ಜೈ ಭೀಮ್ ನಗರಕ್ಕೆ ನಿನ್ನೆ ಬಂದಿದ್ದು, ಈ ವೇಳೆ ಪೌರ ಕಾರ್ಮಿಕ ಸುನಿಲ್ ಎಂಬಾತ ಲಾಕ್ ಡೌನ್ ಇದೆ, ಬರಬೇಡಿ. ಅಲ್ಲದೇ ಮಾಸ್ಕ್ ಧರಿಸಿ ಎಂದು ಬುದ್ದಿ ಹೇಳಿದ್ದಾನೆ. ಆದರೆ, ಈ ವಿಚಾರದಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಈ ವೇಳೆ ಸಿಟ್ಟಿಗೆದ್ದ ಅನ್ವರ್ ಕಾಲೋನಿಯ ಯುವಕ ತನ್ನ ಸ್ನೇಹಿತರೊಂದಿಗೆ ಬಂದು ಬುದ್ದಿ ಹೇಳಿದ ಸುನಿಲ್’ಗೆ ಚಾಕುವಿನಿಂದ ಇರಿದಿದ್ದಾರೆ ಎಂದು ವರದಿಯಾಗಿದೆ.
ಇದರಿಂದ ಅಸ್ವಸ್ಥಗೊಂಡ ಸುನೀಲ್’ನಲ್ಲಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಈತನ ಜೊತೆಯಲ್ಲಿದ್ದ ಶ್ರೀಕಂಠ ಎನ್ನುವವನಿಗೂ ಸಹ ಇರಿಯಲಾಗಿದ್ದು, ಆತನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹಳೇ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post