ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ನನ್ನನ್ನು ಬಂಧಿಸುವ ಮೂಲಕ ಎಎಪಿ #AAP ಪಕ್ಷವನ್ನು ಒಡೆದು, ಸರ್ಕಾರವನ್ನು ಬೀಳಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. -ಅರವಿಂದ ಕೇಜ್ರಿವಾಲ್
ಮುಂದಿನ ಎರಡು ದಿನಗಳಲ್ಲಿ ದೆಹಲಿ ಮುಖ್ಯಮಂತ್ರಿ #ChiefMinister ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ #AravindKejriwal ಹೇಳಿದ್ದಾರೆ.
ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಎಎಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾಡಿದ ಮೊದಲ ಭಾಷಣದಲ್ಲಿ ಈ ವಿಚಾರ ತಿಳಿಸಿರುವ ಅವರು, ಬಿಜೆಪಿ ಪಕ್ಷವು ನಮ್ಮ ಪಕ್ಷವನ್ನು ಮುರಿದು ಸರ್ಕಾರ ರಚಿಸಲು ಬಯಸಿತ್ತು ಎಂದು ದೂರಿದ್ದಾರೆ.
ಅಲ್ಲದೇ ಬಿಜೆಪಿಯವರು ನಮ್ಮ ನೈತಿಕತೆಯನ್ನು ನಾಶಮಾಡಲು ಬಯಸಿದ್ದರು. ಆದರೆ ವಿಫಲರಾಗಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ತಾವು ಬಂಧನವಾದ ನಂತರವೂ ಸಹ ಅವರು ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಏಕೆ ರಾಜೀನಾಮೆ ನೀಡಲಿಲ್ಲ ಎಂಬ ಬಗ್ಗೆಯೂ ಕೇಜ್ರಿವಾಲ್ ಮಾತನಾಡಿದ್ದಾರೆ.

ಸುಳ್ಳು ಆರೋಪ ಹೊರಿಸಿ ಜೈಲಿಗೆ ಕಳುಹಿಸಿದರೆ ರಾಜೀನಾಮೆ ನೀಡಬೇಡಿ ಎಂದು ಎಲ್ಲಾ ವಿರೋಧ ಪಕ್ಷದ ಮುಖ್ಯಮಂತ್ರಿಗಳಿಗೆ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post