ನವದೆಹಲಿ: ರಾಷ್ಟ್ರ ರಾಜಕಾರಣ ಕಂಡ ಶ್ರೇಷ್ಠ ಮಹಿಳಾ ರಾಜಕಾರಣಗಳಲ್ಲಿ ಮೇರು ಸಾಲಿನಲ್ಲಿ ನಿಲ್ಲುವ ಸುಷ್ಮಾ ಸ್ವರಾಜ್ ಇಂದು ದೇಶವನ್ನು ಅಗಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.
ದಶಕಗಳ ಕಾಲ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡು ದೇಶಸೇವೆ, ಜನರ ಸೇವೆಯನ್ನೇ ಉಸಿರಾಗಿಸಿಕೊಂಡ ಸುಷ್ಮಾ ಅವರನ್ನು ಹಲವು ಹುದ್ದೆಗಳು ಅನಾಯಾಸವಾಗಿ ಅರಸಿಬಂದಿತ್ತು. ಈ ತಾಯಿ ಅಲಂಕರಿಸಿದ ಹುದ್ದೆಗಳೇ ಹೇಳುತ್ತವೆ ಅವರ ದೇಶಸೇವೆ ಹೇಗಿತ್ತು ಎಂದು..
ಸುಷ್ಮಾ ಅಲಂಕರಿಸಿದ ಹುದ್ದೆಗಳು ಹೀಗಿವೆ ನೋಡಿ:
1977-82: ಹರಿಯಾಣಾ ವಿಧಾನಸಭೆಯ ಸದಸ್ಯರಾಗಿ ಆಯ್ಕೆ
1977-79: ಕ್ಯಾಬಿನೆಟ್ ಮಂತ್ರಿ, ಕಾರ್ಮಿಕ ಮತ್ತು ಉದ್ಯೋಗ, ಹರಿಯಾಣ ಸರ್ಕಾರ
1987-90: ಹರಿಯಾಣಾ ವಿಧಾನಸಭೆಯ ಸದಸ್ಯರಾಗಿ ಆಯ್ಕೆ
1987-90: ಕ್ಯಾಬಿನೆಟ್ ಮಂತ್ರಿ, ಶಿಕ್ಷಣ, ಆಹಾರ ಮತ್ತು ನಾಗರಿಕ ಸರಬರಾಜು, ಹರಿಯಾಣ ಸರ್ಕಾರ
1990-96: ರಾಜ್ಯಸಭೆಗೆ ಆಯ್ಕೆ (1 ನೆಯ ಅವಧಿ)
1996-97: ಹನ್ನೊಂದನೆಯ ಲೋಕಸಭೆ ಸದಸ್ಯೆ(ಎರಡನೆಯ ಅವಧಿ)
1996 : ಕೇಂದ್ರ ಸಚಿವ ಸಂಪುಟ ಸದಸ್ಯೆ, ಮಾಹಿತಿ ಮತ್ತು ಪ್ರಸಾರ
1998-99, 10 ಮಾರ್ಚ್ 1998 – 26 ಏಪ್ರಿಲ್
1999: ಹನ್ನೆರಡನೆಯ ಲೋಕಸಭೆ ಸದಸ್ಯೆ,(3 ನೆಯ ಅವಧಿ)
1998, 19ಮಾರ್ಚ್ – 12ಅಕ್ಟೋಬರ್: ಯೂನಿಯನ್ ಕ್ಯಾಬಿನೆಟ್ ಮಂತ್ರಿ, ಮಾಹಿತಿ ಮತ್ತು ಪ್ರಸಾರ ಮತ್ತು
ದೂರಸಂಪರ್ಕ
1998, 13 ಅಕ್ಟೋಬರ್ – 3 ಡಿಸೆಂಬರ್: ದೆಹಲಿಯ ಮುಖ್ಯಮಂತ್ರಿ
1998 ನವೆಂಬರ್: ದೆಹಲಿ ಅಸೆಂಬ್ಲಿಯ ಹಾಝ ಖಾಸ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ
2000-06: ರಾಜ್ಯಸಭೆ ಸದಸ್ಯೆ, (4ನೆಯ ಅವಧಿ)
2000, 30 ಸೆಪ್ಟೆಂಬರ್ 2000- 29 ಜನವರಿ 2003: ಮಾಹಿತಿ ಮತ್ತು ಪ್ರಸಾರ ಸಚಿವೆ
2003-04. 29 ಜನವರಿ 2003 – 22 ಮೇ 2004: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮತ್ತು
ಸಂಸದೀಯ ವ್ಯವಹಾರಗಳ ಸಚಿವೆ
2006, 09: ರಾಜ್ಯಸಭೆ ಸದಸ್ಯೆ,(5 ನೆಯ ಅವಧಿ)
2009, 14, 16 ಮೇ 2009 – 18 ಮೇ 2014: 15 ನೆಯ ಲೋಕಸಭೆ ಸದಸ್ಯೆ,(6ನೆಯ ಅವಧಿ)
2009, 3 ಜೂನ್ 2009- 21 ಡಿಸೆಂಬರ್ 2009: ಲೋಕಸಭೆಯಲ್ಲಿ ಪ್ರತಿಪಕ್ಷದ ಉಪನಾಯಕಿ
2009-14, 21 ಡಿಸೆಂಬರ್ 2009- 18 ಮೇ 2014: ಲಾಲ್ ಕೃಷ್ಣ ಆಡ್ವಾಣಿ ಬದಲಿಗೆ ಪ್ರತಿಪಕ್ಷ ನಾಯಕಿ 2014, 26 ಮೇ: 16ನೇ ಲೋಕಸಭೆ ಸದಸ್ಯೆ,(7 ನೆಯ ಅವಧಿ)
2014, 26 ಮೇ: ಭಾರತದ ಒಕ್ಕೂಟದ ವಿದೇಶಾಂಗ ಸಚಿವೆ
Discussion about this post