ಲಖ್ನೋ: ರಾಜಕೀಯ ವಿರೋಧಿಗಳನ್ನು ಚುನಾವಣೆಯಲ್ಲಿ ಹಣಿಯುವ ತಂತ್ರಗಾರಿಕೆಯ ಭಾಗವಾಗಿ ಒಂದೇ ಹೆಸರಿನ ಹಲವು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಪ್ರವೃತ್ತಿ ಹೆಚ್ಚಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಸಹ ಬಿಟ್ಟಿಲ್ಲ.
ನೋಡಲು ಪ್ರಧಾನಿ ನರೇಂದ್ರ ಮೋದಿಯಂತೆಯೇ ಕಾಣುವ ವ್ಯಕ್ತಿಯೊಬ್ಬರು ಇದೀಗ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.
ಅಭಿನಂದನ್ ಪಾಠಕ್ ಎನ್ನುವ ವ್ಯಕ್ತಿ ಮೋದಿ ವಿರುದ್ಧ ಸ್ಪರ್ಧೆ ಮಾಡಲು ನಿರ್ಧರಿಸಿದ್ದು, ಲಖ್ನೋ ಹಾಗೂ ವಾರಣಾಸಿಯಿಂದ ತಮ್ಮ ನಾಮಪತ್ರ ಸಲ್ಲಿಕೆ ಮಾಡುವುದಾಗಿ ಘೋಷಿಸಿದ್ದಾರೆ.
Abhinandan Pathak, a PM Modi lookalike, filed his nomination as Independent candidate from Lucknow today. Says, "I'll also file nomination from Varanasi on 26. I am not a dummy candidate. I am not against anyone but 'jumla'. After winning, I'll support Rahul ji's PM candidature. pic.twitter.com/SUs0UgGApW
— ANI UP (@ANINewsUP) April 12, 2019
ಮೋದಿ ಸರ್ಕಾರವನ್ನು ತೀವ್ರವಾಗಿ ವಿರೋಧಿಸುವ ಇವರು, ಮೋದಿ ಅವರ ಜುಮ್ಲಾ ರಾಜಕೀಯದ ವಿರುದ್ಧ ನನ್ನ ಹೋರಾಟವಿದ್ದು, ಇದೇ ಕಾರಣಕ್ಕೆ ಅವರ ವಿರುದ್ಧ ವಾರಣಾಸಿಯಲ್ಲಿ ಸ್ಪರ್ಧಿಸುತ್ತಿದ್ದೇನೆ. ನಾನು ಡಮ್ಮಿ ಅಭ್ಯರ್ಥಿಯಲ್ಲ ಎಂದಿದ್ದಾರೆ.
Discussion about this post