ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಅಂಬರೀಶ್ ನಿಧನರಾದ ಹಿನ್ನೆಲೆಯಲ್ಲಿ ತೀವ್ರ ಆಘಾತ ವ್ಯಕ್ತಪಡಿಸಿರುವ ನಟ ಜಗ್ಗೇಶ್, ತಮ್ಮ ಮನದಾಳದ ನೋವನ್ನು ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ವಿಷಯ ತಿಳಿದು ತುಂಬ ದುಃಖವಾಯಿತು. ಕಳೆದ ಗುರುವಾರ ಕರೆಮಾಡಿದೆ ದೂರವಾಣಿ ಕನೆಕ್ಟ್ ಆಗಲಿಲ್ಲ. ದೊಡ್ಡಣ್ಣನಿಗೆ ನಂ ಸರಿಯೇ ಎಂದು ಕೇಳಿದೆ ಅದೇ ನಂ. ಮಲಗಿದ್ದಾರೆ ಘಂಟೆ ಬಿಟ್ಟುಮಾಡು ಎಂದರು ಎಂದಿದ್ದಾರೆ.
ತುಂಬ ದುಃಖವಾಯಿತು..ಕಳೆದ ಗುರುವಾರ ಕರೆಮಾಡಿದೆ ದೂರವಾಣಿ ಕನೆಕ್ಟ್ ಆಗಲಿಲ್ಲಾ!ದೊಡ್ಡಣ್ಣನಿಗೆ ನಂ ಸರಿಯೇ ಎಂದು ಕೇಳಿದೆ!ಅದೆ ನಂ..ಮಲಗಿದ್ದಾರೆ ಘಂಟೆ ಬಿಟ್ಟುಮಾಡು ಎಂದರು..ನಾನು 8mm ಬಿಡುಗಡೆಗೆ bussyಆಗಿಬಿಟ್ಟೆ..ಇಂದು ತಿರುನಲ್ಲಾರ್ ಗೆ ದೇವರಕಾರ್ಯಕ್ಕೆ ಬಂದೆ..ಅಂಬಿ ಸಾರ್ ದೇವರ ಬಳಿಯೇ ಹೋಗಿಬಿಟ್ಟರು..
ರಾಯರಲ್ಲಿ ಲೀನವಾದರು..ಓಂಶಾಂತಿ pic.twitter.com/aSCcVZUaQo— ನವರಸನಾಯಕ ಜಗ್ಗೇಶ್ (@Jaggesh2) November 24, 2018
ನಾನು 8ಎಂಎಂ ಬಿಡುಗಡೆಗೆ ಬ್ಯುಸಿ ಆಗಿಬಿಟ್ಟೆ. ಇಂದು ತಿರುನಲ್ಲಾರ್ ಗೆ ದೇವರಕಾರ್ಯಕ್ಕೆ ಬಂದೆ. ಅಂಬಿ ಸಾರ್ ದೇವರ ಬಳಿಯೇ ಹೋಗಿಬಿಟ್ಟರು.. ರಾಯರಲ್ಲಿ ಲೀನವಾದರು..ಓಂಶಾಂತಿ ಎಂದು ದುಃಖ ವ್ಯಕ್ತಪಡಿಸಿದ್ದಾರೆ.

















