ಕಲ್ಪ ಮೀಡಿಯಾ ಹೌಸ್ | ಉಡುಪಿ |
ಖ್ಯಾತ ಚಿತ್ರ ನಟ ಧ್ರುವ ಸರ್ಜಾ #DhruvaSarja ಅವರು ಇಂದು ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದರು.
ತಮ್ಮ ಸ್ನೇಹಿತರೊಂದಿಗೆ ಇಂದು ಕೃಷ್ಣ ಮಠಕ್ಕೆ #KrishnaMatha ಭೇಟಿ ನೀಡಿದ ಸರ್ಜಾ, ನವಗ್ರಹ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಪಡೆದರು.
ನಂತರ ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ದರ್ಶನ ಪಡೆದು ಕೋಟಿ ಗೀತಾ ಲೇಖನ ಯಜ್ಞದ ದೀಕ್ಷೆಯನ್ನು ಶ್ರೀಗಳಿಂದ ಪಡೆದರು.ಗುರುಗಳಿಂದ ಅನುಗ್ರಹ ಮಂತ್ರಾಕ್ಷತೆ ಹಾಗೂ ಪ್ರಸಾದ ಪಡೆದ ಧ್ರುವ ಸರ್ಜಾ, ಕೆಲವು ಕಾಲ ಸ್ವಾಮಿಗಳೊಂದಿಗೆ ಮಾತುಕತೆ ನಡೆಸಿದರು.
ನಂತರ ಶ್ರೀಮಠದಲ್ಲಿಯೇ ಅವರು ಅನ್ನ ಪ್ರಸಾದ ಸೇವಿಸಿದರು.
ಈ ಸಂದರ್ಭದಲ್ಲಿ ಸರ್ಜಾ ಅವರು ಸ್ನೇಹಿತರು, ಶ್ರೀಮಠದ ಮಧೂರು ನಾರಾಯಣ ಶರಳಾಯ ಸೇರಿದಂತೆ ಹಲವು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post